ದರೋಡೆ ಪ್ರಕರಣ; ಪ.ಪಂ. ಸದಸ್ಯನ ಬಂಧನ

7

ದರೋಡೆ ಪ್ರಕರಣ; ಪ.ಪಂ. ಸದಸ್ಯನ ಬಂಧನ

Published:
Updated:
Deccan Herald

ಕೊಲ್ಹಾರ (ವಿಜಯಪುರ): ಜಾತಿ ನಿಂದನೆ, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲ್ಹಾರ ಪಟ್ಟಣ ಪಂಚಾಯ್ತಿಯ ಐದನೇ ವಾರ್ಡ್‌ನ ಪಕ್ಷೇತರ ಸದಸ್ಯ ಸಿದ್ದಪ್ಪ ಧರೆಪ್ಪ ಗುಣಕಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಸಿದ್ದಪ್ಪ ತನ್ನ ಸಹೋದರರೊಟ್ಟಿಗೆ ರಾಜು ವಡ್ಡರ ಎಂಬಾತನ ಮೇಲೆ ಹಲ್ಲೆ ನಡೆಸಿ, ಆತನ ಕೊರಳಲ್ಲಿದ್ದ ಚೈನ್‌ ಕಿತ್ತುಕೊಂಡು ಜಾತಿ ನಿಂದನೆ ನಡೆಸಿದ್ದರು ಎಂಬ ದೂರು ದಾಖಲಾಗಿತ್ತು. ಇದರನ್ವಯ ಮಂಗಳವಾರ ಸಂಜೆ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೆವು.

ನ್ಯಾಯಾಧೀಶರು ಇದೇ 12ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನದ ಆದೇಶ ನೀಡಿದ್ದಾರೆ’ ಎಂದು ಬಸವನಬಾಗೇವಾಡಿ ಸಿಪಿಐ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !