ಸುಲಿಗೆಕೋರರ ಬೆನ್ನಟ್ಟಿ ಹಿಡಿದ ಪೊಲೀಸರು

7

ಸುಲಿಗೆಕೋರರ ಬೆನ್ನಟ್ಟಿ ಹಿಡಿದ ಪೊಲೀಸರು

Published:
Updated:
Deccan Herald

ಬೆಂಗಳೂರು: ವ್ಯಕ್ತಿಯೊಬ್ಬರ ಬೈಕ್ ಹಾಗೂ ಮೊಬೈಲ್‌ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳಿಬ್ಬರನ್ನು ಪೀಣ್ಯ ಸಂಚಾರ ಠಾಣೆಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

ಬಾಗಲಕುಂಟೆಯ ಹರೀಶ್ ಹಾಗೂ ಸುರೇಶ್‌ ಬಂಧಿತರು. ಅವರಿಂದ ಬೈಕ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.

‘ಕಾನ್‌ಸ್ಟೆಬಲ್‌ಗಳಾದ ಪ್ರಕಾಶ್ ಹಾಗೂ ನಾಗರಾಜ್‌, ಬಾಗಲಕುಂಟೆ ಬಳಿ ಶನಿವಾರ ರಾತ್ರಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಎರಡು ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು, ಪೊಲೀಸರನ್ನು ಕಂಡು ಪರಾರಿಯಾಗಲು ಮುಂದಾಗಿದ್ದರು. ಅನುಮಾನಗೊಂಡ ಕಾನ್‌ಸ್ಟೆಬಲ್‌ಗಳು, 2 ಕಿ.ಮೀವರೆಗೂ ಬೆನ್ನಟ್ಟಿ ಅವರಿಬ್ಬರನ್ನು ಹಿಡಿದುಕೊಂಡರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

’ಆರೋಪಿಗಳು, ಬಾಗಲಕುಂಟೆಯಲ್ಲಿ ರಾತ್ರಿ  ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಅವರನ್ನು ರಸ್ತೆಯಲ್ಲೇ ತಳ್ಳಿ ಬೈಕ್‌ ಸಹ ಕಸಿದುಕೊಂಡು ತಪ್ಪಿಸಿಕೊಂಡಿದ್ದರು. ಕಾನ್‌ಸ್ಟೆಬಲ್‌ಗಳಿಗೆ ಸಿಕ್ಕ ಬಳಿಕ ಆರೋಪಿಗಳು ತಪ್ಪೊಪ್ಪಿಕೊಂಡರು. ಬಾಗಲಕುಂಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಅಲ್ಲಿಯ ಪೊಲೀಸರ ವಶಕ್ಕೆ ನೀಡಲಾಗಿದೆ’ ಎಂದರು.

ಬಾಗಲಕುಂಟೆ ಪೊಲೀಸರು, ‘ಗಾರೆ ಕೆಲಸ ಮಾಡುವ ಆರೋಪಿಗಳು, ರಾತ್ರಿ ವೇಳೆ ಸುಲಿಗೆ ಮಾಡುತ್ತಿದ್ದರು. ಅವರಿಬ್ಬರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !