ರೋಬೊ ಫೆಸ್ಟ್‌ನಲ್ಲಿ ಚಿಣ್ಣರ ಓಡಾಟ

ಶನಿವಾರ, ಏಪ್ರಿಲ್ 20, 2019
24 °C

ರೋಬೊ ಫೆಸ್ಟ್‌ನಲ್ಲಿ ಚಿಣ್ಣರ ಓಡಾಟ

Published:
Updated:
Prajavani

ಕೆ.ಆರ್.ಪುರ: ನೋವೊಟೆಕ್ ರೋಬೊ ಸಂಸ್ಥೆ ಹಾಗೂ ಮಿಚಿಗನ್ ಲಾರೆನ್ಸ್‌ ತಾಂತ್ರಿಕ ವಿಶ್ವವಿದ್ಯಾಲಯ ಗೆದ್ದಲ ಹಳ್ಳಿಯ ಬೆಂಗಳೂರು ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ‘ರೋಬೊ ಫೆಸ್ಟ್’ ಆಯೋಜಿಸಿತ್ತು.

ಹತ್ತಾರು ಶಾಲೆಗಳ 5ನೇ ತರಗತಿ ಯಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಕುತೂಹಲದಿಂದ ರೋಬೊ ತಂತ್ರಜ್ಞಾನದ ಕುರಿತು ತಿಳಿದು ಕೊಂಡರು. ಚರ್ಚೆ, ಸಂವಾದಗಳಲ್ಲೂ ಭಾಗವಹಿಸಿದರು. ‘ತಾಂತ್ರಿಕ ಮಾನವ’ ರನ್ನು ಕೈಯಿಂದ ಮುಟ್ಟಿ, ಬಟನ್‌ಗಳನ್ನು ಒತ್ತುವ ಮೂಲಕ ನಿಯಂತ್ರಿಸುವುದನ್ನು ಕಲಿತರು. ಎಂಜಿನಿಯರಿಂಗ್‌, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ, ವೈದ್ಯಕೀಯ ರಂಗದಲ್ಲಿ ರೋಬೊಗಳು ಹೇಗೆ ಸಹಕಾರಿ ಆಗುತ್ತವೆ ಎಂದು ತಿಳಿದುಕೊಂಡರು. ತಂತ್ರಜ್ಞರು ರೋಬೊ ತಂತ್ರಜ್ಞಾನದಲ್ಲಿನ ಅನ್ವೇಷಣೆಗಳ ಕುರಿತು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !