ಆರ್‌ಟಿಇ ಅರ್ಜಿ ಸಲ್ಲಿಕೆ ಗೊಂದಲ

ಬುಧವಾರ, ಏಪ್ರಿಲ್ 24, 2019
27 °C

ಆರ್‌ಟಿಇ ಅರ್ಜಿ ಸಲ್ಲಿಕೆ ಗೊಂದಲ

Published:
Updated:

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಮೀಸಲು ಸೀಟುಗಳಡಿ ದಾಖಲಾಗಲು ಮಕ್ಕಳು ನಿರ್ದಿಷ್ಟ ವರ್ಷಗಳ ದಿನಾಂಕಗಳ ನಡುವೆಯೇ ಜನಿಸಿರಬೇಕೆಂಬ ನಿಯಮ ರೂಪಿಸಿರುವುದು ಅವೈಜ್ಞಾನಿಕ ಎಂದು ಪೋಷಕರು ದೂರಿದ್ದಾರೆ.

ಆರ್‌ಟಿಇ ಕೋಟಾದಡಿ ಮಗು ವೊಂದು 1ನೇ ತರಗತಿಗೆ ದಾಖಲಾಗಬೇಕಾದರೆ, ಆ ಮಗು 01.08.2012 ರಿಂದ 01.08.2013ರೊಳಗಿನ ದಿನ ದಂದೆ ಹುಟ್ಟಿರಬೇಕೆಂಬ ನಿಯಮವಿದೆ.

‘ಮಗುವೊಂದು ಶಾಲೆಗೆ ದಾಖಲಾಗಬೇಕಾದರೆ 5 ವರ್ಷ 10 ತಿಂಗಳು ಆಗಿರಬೇಕೆಂಬ ಸಾಮಾನ್ಯ ನಿಯಮವಿದೆ. ಹಾಗೆ ನೋಡಿದರೆ, 2013ರ ಆಗಸ್ಟ್‌ನ ಎಲ್ಲ ದಿನಗಳಲ್ಲಿ ಹುಟ್ಟಿದ ಮಕ್ಕಳು ಆರ್‌ಟಿಇ ದಾಖ ಲಾತಿಗೆ ಅರ್ಹರು. ಆದರೆ, 1 ಆಗಸ್ಟ್‌ ವರೆಗೂ ಹುಟ್ಟಿದ ಮಕ್ಕಳಿಗೆ ಮಾತ್ರ ದಾಖಲಾತಿಯ ಅವಕಾಶ ಸಿಗುತ್ತಿದೆ’ ಎಂದು ಪೋಷಕರೊಬ್ಬರು ದೂರಿದರು.

‘ಮಗುವಿನ ಜನನ ದಿನ ನಿಗದಿತ ದಿನಾಂಕಗಳಿಗಿಂತ ಒಂದು ದಿನವೂ ವ್ಯತ್ಯಾಸವಾದರೆ, ಆರ್‌ಟಿಇ ಅರ್ಜಿ ಭರ್ತಿ ಆಗುವುದಿಲ್ಲ. ಇಂತಹ ಅವೈಜ್ಞಾನಿಕ ನಿಯಮ ತೆಗೆದು ಹಾಕಬೇಕು’ ಎಂದು ಅವರು ಒತ್ತಾಯಿಸಿದರು.

‘ದಾಖಲಾತಿಗಾಗಿ ನಿಗದಿತ ದಿನಾಂಕದಲ್ಲಿಯೇ ಮಗು ಜನಿಸಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಕೆಲವು ಪೋಷಕರು ಅರ್ಜಿ ಹಾಕುತ್ತಿದ್ದಾರೆ’ ಎಂದು ರಾಜಾಜಿನಗರದ ಶಾಲೆಯೊಂದಕ್ಕೆ ಮಗನನ್ನು ದಾಖಲಿಸಲು ಅರ್ಜಿ ಸಲ್ಲಿಸಲು ಇಚ್ಛಿಸಿರುವ ಪೋಷಕರೊಬ್ಬರು ಹೇಳಿದರು.

‘ಮಾರ್ಚ್‌ 20 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೂರು ದಿನ ಕಳೆದರೂ ಆರ್‌ಟಿಇ ತಂತ್ರಾಂಶದಲ್ಲಿನ ದೋಷ ಸರಿಪಡಿಸಿಲ್ಲ. ಅರ್ಜಿ ಸಲ್ಲಿಕೆ ಆಗುತ್ತಿಲ್ಲ’ ಎಂದು ಅವರು ದೂರಿದರು.

‘ನಿರ್ದಿಷ್ಟ ದಿನಾಂಕಗಳ ನಡುವಿನ ಕಾಲಾವಧಿ ಬದಲಾಗಿ ನಿರ್ದಿಷ್ಟ ತಿಂಗಳುಗಳ ನಡುವಿನ ಅಂತರವನ್ನು ಅರ್ಜಿಯಲ್ಲಿ ಉಲ್ಲೇಖಿಸಬೇಕಿತ್ತು’ ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ಜಿ.ನಾಗಸಿಂಹ ರಾವ್ ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !