ಆರ್‌ಟಿಐ ಕಾಯ್ದೆ ನಿಯಮ ಸಿಂಧುತ್ವ ಪ್ರಶ್ನಿಸಿ ರಿಟ್‌

7
ವಿಚಾರಣೆ ಡಿ. 21ಕ್ಕೆ ಮುಂದೂಡಿಕೆ

ಆರ್‌ಟಿಐ ಕಾಯ್ದೆ ನಿಯಮ ಸಿಂಧುತ್ವ ಪ್ರಶ್ನಿಸಿ ರಿಟ್‌

Published:
Updated:
Deccan Herald

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) 14ನೇ ನಿಯಮದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ ಹೈಕೋರ್ಟ್‌ ಡೆಪ್ಯುಟಿ ರಿಜಿಸ್ಟ್ರಾರ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿದೆ.

ಇತ್ತೀಚೆಗೆ ಹೈಕೋರ್ಟ್‌ನ 18 ವಕೀಲರನ್ನು ‘ಹಿರಿಯ ವಕೀಲ’ರನ್ನಾಗಿ ನಿಯುಕ್ತಿಗೊಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಎಂ.ವೀರಭದ್ರಯ್ಯ ಕೆಲವು ಮಾಹಿತಿ ನೀಡುವಂತೆ ಡೆಪ್ಯುಟಿ ರಿಜಿಸ್ಟ್ರಾರ್‌ ಅವರಿಗೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಡೆಪ್ಯುಟಿ ರಿಜಿಸ್ಟ್ರಾರ್‌, ‘ಒಂದು ವಿಷಯವನ್ನು ಮೀರಿ ಹೆಚ್ಚಿನ ವಿಷಯಗಳ ವಿವರ ಬಯಸಿದರೆ ಅವುಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಹೀಗಾಗಿ ನಿಯಮ 14ರ ಅನ್ವಯ ನಿಮ್ಮ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ’ ಎಂದು ಲಿಖಿತ ಉತ್ತರ ನೀಡಿದ್ದರು. ಇದನ್ನು ಆಕ್ಷೇಪಿಸಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !