ಬೃಹತ್ ಸೇನಾ ಶಕ್ತಿ ಪ್ರದರ್ಶನಕ್ಕೆ ರಷ್ಯಾ ಸಜ್ಜು

7
ದೊಡ್ಡ ಸಂಘರ್ಷಕ್ಕೆ ಮುನ್ನುಡಿ ಎಂದ ನ್ಯಾಟೊ

ಬೃಹತ್ ಸೇನಾ ಶಕ್ತಿ ಪ್ರದರ್ಶನಕ್ಕೆ ರಷ್ಯಾ ಸಜ್ಜು

Published:
Updated:
Deccan Herald

ಮಾಸ್ಕೊ: ಇತಿಹಾಸದಲ್ಲೇ ಬೃಹತ್ ಎನ್ನಲಾದ ಸೇನಾ ಕವಾಯತು ನಡೆಸಲು ರಷ್ಯಾ ಸಜ್ಜಾಗಿದೆ. ಮಂಗಳವಾರ (ಸೆ.11) ಪೂರ್ವ ಸೈಬೀರಿಯಾದಲ್ಲಿ ಚೀನಾ, ಮಂಗೋಲಿಯ ಸೈನಿಕರನ್ನೂ ಒಳಗೊಂಡಂತೆ ದೊಡ್ಡ ಮಟ್ಟದಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ರಷ್ಯಾ ಪ್ರದರ್ಶಿಸಲಿದೆ. 

‘ವೊಸ್ಟೊಕ್–2018’ ಹೆಸರಿನ ಈ ಕಾರ್ಯಾಚರಣೆಯನ್ನು ನ್ಯಾಟೋ ಟೀಕಿಸಿದೆ. ‘ದೊಡ್ಡ ಪ್ರಮಾಣದಲ್ಲಿ ಸಂಘರ್ಷ ಸೃಷ್ಟಿಸುವ ಯತ್ನ’ ಎಂದು ಅದು ಕರೆದಿದೆ. ಆದರೆ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ. 

ಸೋವಿಯತ್ ಒಕ್ಕೂಟದ ಅವಧಿಯಲ್ಲಿ 1981ರಲ್ಲಿ ನಡೆದಿದ್ದ ಬೃಹತ್ ಸೇನಾ ಕಸರತ್ತಿನ ಬಳಿಕ ನಡೆಯುತ್ತಿರುವ ಅತಿದೊಡ್ಡ ಯತ್ನ ಎಂದು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೊಯಿಗು ಹೇಳಿದ್ದಾರೆ. 2014ರಲ್ಲಿ ನಡೆದಿದ್ದ ಸೇನಾ ಕಸರತ್ತಿಗಿಂತ ಇದು ದುಪ್ಪಟ್ಟು ದೊಡ್ಡದು. ಆಗ 1.55 ಲಕ್ಷ ಸೈನಿಕರು ಭಾಗಿಯಾಗಿದ್ದರು.

ಉಕ್ರೇನ್, ಸಿರಿಯಾ ಹಾಗೂ ಪಶ್ಚಿಮದ ದೇಶಗಳ ವಿದ್ಯಮಾನಗಳಲ್ಲಿ ರಷ್ಯಾ ಕೈಹಾಕುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಷ್ಯಾ ಹಾಗೂ ಪಾಶ್ಚಿಮಾತ್ಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿದೆ. ಈ ಸಮಯದಲ್ಲೇ ಅದು ಬಲಪ್ರದರ್ಶನಕ್ಕೆ ಮುಂದಾಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇದಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !