ಶನಿವಾರ, ಸೆಪ್ಟೆಂಬರ್ 21, 2019
21 °C

ಸದಾಶಿವನ ಮಹಿಮೆ ಅಪಾರ: ಸಿದ್ಧರಾಮೇಶ್ವರ

Published:
Updated:
Prajavani

ವಿಜಯಪುರ: ‘ಪರಿಶುದ್ಧ ಮನಸ್ಸಿನಿಂದ ಶ್ರೀ ಮಠಕ್ಕೆ ಯಾರು ಭಕ್ತಿಯಿಂದ ನಡೆದುಕೊಳ್ಳುತ್ತಾರೋ, ಅವರ ಬದುಕು ಪಾವನವಾಗುತ್ತದೆ. ಮೋಸ ಬಹಳ ದಿನ ನಡೆಯಲಾರದು’ ಎಂದು ಹುಲ್ಯಾಳ-ರಹೀಂ ನಗರದ ಸದಾಶಿವ ಮಠದ ಪೀಠಾಧಿಪತಿ ಸಿದ್ಧರಾಮೇಶ್ವರ ಚಿಕ್ಕಯ್ಯನವರಮಠ ತಿಳಿಸಿದರು.

ಇಲ್ಲಿನ ರಹೀಂ ನಗರದ ಸದಾಶಿವ ಮಠದಲ್ಲಿ ಚಂದ್ರಗಿರಿ ದೇವಿ, ಶ್ರೀಗುರು ಚಕ್ರವರ್ತಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ನಡೆದ ಸರಳ ಸಾಮೂಹಿಕ ಮದುವೆಯಲ್ಲಿ ಆಶೀರ್ವಚನ ನೀಡಿದರು.

ಸೊಕ್ಕೆ ಗ್ರಾಮದ ಬಬಲಾದಿ ಶಾಖಾ ಮಠದ ಸಾರಂಗಪ್ಪಯ್ಯ ಸ್ವಾಮಿ ಅತೀತ ಮಠ ಮಾತನಾಡಿ ‘ಮನುಷ್ಯನ ದುರಾಸೆ, ಸ್ವಾರ್ಥವೆಂಬ ಬೆಂಕಿ ಜಗತ್ತನ್ನು ಸುಡುತ್ತಿದೆ. ಜಿಲ್ಲೆಯಲ್ಲಿನ ಭೀಕರ ಬರ, ಬಿರು ಬಿಸಿಲಿಗೆ ನಾವೇ ಕಾರಣ. ಇದರ ಪರಿಹಾರಕ್ಕೆ ಮರ ಬೆಳೆಸಬೇಕು. ಮಳೆ ನೀರು ಹಿಡಿದಿಡಬೇಕು’ ಎಂದರು.

ಚಿಕ್ಕ ಹಂಚಿನಾಳದ ಶಾಂತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿದರಿಯ ಶಿವಲಿಂಗೇಶ್ವರ ಸ್ವಾಮೀಜಿ. ಸಾರವಾಡದ ರುದ್ರಸ್ವಾಮಿ ಹಿರೇಮಠ, ತೊರವಿಯ ಮಲ್ಲಿಕಾರ್ಜುನ ಶಾಸ್ತ್ರಿ, ಹೊಕ್ಕುಂಡಿಯ ದಾನಮ್ಮ ತಾಯಿ, ಬರಗುಡಿಯ ಮದ್ದಾನಿ ಮಹಾರಾಜರು, ಗಮಕ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ಪಾಟೀಲ, ಸೋಮನಿಂಗಗೌಡ ಪಾಟೀಲ ಬರಗುಡಿ, ಪಂಡಿತ ಮನೋಜ ಶಾಸ್ತ್ರಿ ಉಪಸ್ಥಿತರಿದ್ದರು.

Post Comments (+)