9 ವಾಣಿಜ್ಯ ಕಚೇರಿಗಳಿಗೆ ಪಾಲಿಕೆ ಬೀಗ

7
ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ: ಸಚಿವರ ಸೂಚನೆ ಬೆನ್ನಲ್ಲೇ ಕಾರ್ಯಾಚರಣೆ

9 ವಾಣಿಜ್ಯ ಕಚೇರಿಗಳಿಗೆ ಪಾಲಿಕೆ ಬೀಗ

Published:
Updated:
Prajavani

ಬೆಂಗಳೂರು: ವಸತಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಸೂಚನೆ ನೀಡಿದ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಇಂತಹ ಮಳಿಗೆಗಳ ವಿರುದ್ಧ ಬುಧವಾರ ಕಾರ್ಯಾಚರಣೆ ಆರಂಭಿಸಿದರು.

ಸದಾಶಿವನಗರದಲ್ಲಿ ಟ್ಯಾಂಕ್ ಬಂಡ್ ರಸ್ತೆ, ಆರ್.ಎಂ.ವಿ ಎಕ್ಸ್‌ಟೆನ್ಷನ್‌ ಹಾಗೂ ಸ್ಯಾಂಕಿ ಕೆರೆ ಮುಂಭಾಗದ ದ್ವಾರದ ಬಳಿ 40 ಅಡಿಗಿಂತ ಕಡಿಮೆ ವಿಸ್ತೀರ್ಣದ ರಸ್ತೆಗಳ ಬಳಿ ಇದ್ದ ವಾಣಿಜ್ಯ ಕಚೇರಿಗಳಿಗೆ ಪಾಲಿಕೆ ಅಧಿಕಾರಿಗಳು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ ನೇತೃತ್ವದಲ್ಲಿ ದಾಳಿ ನಡೆಸಿದರು.

‘ಈ ಪರಿಸರದಲ್ಲಿ 9 ಕಂಪನಿಗಳ ಕಚೇರಿಗಳು ಉದ್ದಿಮೆ ಪರವಾನಗಿ ಇಲ್ಲದೆಯೇ ಕಾರ್ಯನಿರ್ವಹಿಸುವುದು ಪತ್ತೆಯಾಗಿದೆ. ಈ ಕಟ್ಟಡಗಳ ಶೇ 90ಕ್ಕೂ ಅಧಿಕ ಪ್ರದೇಶ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿತ್ತು. ಶಾಲಾ ಮಕ್ಕಳಿಗಾಗಿ ವಿಡಿಯೊ ತಯಾರಿಸುವ ಡಿಸೈನ್ ವೆಂಚರ್ ಸಾಫ್ಟ್‌ವೇರ್‌ ಕಂಪನಿ, ಇನ್ನೋವೇಟಿವ್ ಟೆಲಿ ಸರ್ವಿಸಸ್  ಕಾಲ್‌ ಸೆಂಟರ್‌, ಪ್ಲಾಸ್ಟಿಕ್‌ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಲೋಹಿಯಾ ಕಾರ್ಪ್‌ ಕಂಪನಿ, ಎಜಿಎಸ್ ವೆಂಚರ್ ಕಾಲ್‌ ಸೆಂಟರ್‌, ಮಕ್ಕಳಿಗೆ ವಿಡಿಯೊ ಗೇಮ್‌ಗಳನ್ನು ತಯಾರಿಸಿ ಪೂರೈಸುವ ಬ್ರೈನ್ ಜಿಮ್ ಕಂಪನಿ, ಸಾಫ್ಟ್‌ವೇರ್‌ ಕಂಪನಿಗಳಾದ ಟಿರಾ, ಗ್ರೀನ್ಸ್‌ ಹಾಗೂ ವಿಜ್ಹಾರ್ಡರಿ ವೆಂಚರ್ ಹಾಗೂ ಟೈಮ್ ಆ್ಯಂಡ್‌ ಸ್ಪೇಸ್ ಎಂಜಿನಿಯರಿಂಗ್ ಕಂಪನಿ ಕಚೇರಿಗಳಿಗೆ ಬೀಗ ಹಾಕಿದ್ದೇವೆ’ ಎಂದು ವೈದ್ಯಾಧಿಕಾರಿ ಡಾ. ಸುರೇಶ್‌ ಮಾಹಿತಿ ನೀಡಿದರು.

‘ಈ ಕಚೇರಿಗಳನ್ನು ಮಾಲೀಕರು ತಕ್ಷಣವೇ ಖಾಲಿ ಮಾಡುವಂತೆ ಸೂಚಿಸಿದ್ದೇವೆ. ಮಾಲೀಕರಿಗೆ ದಂಡ ವಿಧಿಸುವುದಿಲ್ಲ’ ಎಂದರು.

‘ರಸ್ತೆಯ ಅಗಲ 40 ಅಡಿಗಿಂತ ಕಡಿಮೆ ಇರುವಲ್ಲಿ ಯಾವುದೇ ವಾಣಿಜ್ಯ ವಹಿವಾಟಿಗೆ ಪಾಲಿಕೆ ಪರವಾನಗಿ ನೀಡುವುದಿಲ್ಲ. ಇಂತಹ ಕಡೆ ವಾಣಿಜ್ಯ ಚಟುವಟಿಕೆ ನಡೆಸುವುದು ಕಾನೂನುಬಾಹಿರ. ಹಾಗಾಗಿ ಯಾರೆಲ್ಲ ಈ ರೀತಿ ಅನಧಿಕೃತವಾಗಿ ಕಚೇರಿ ನಡೆಸುತ್ತಿದ್ದಾರೋ ಅವರು ಸ್ವಯಂಪ್ರೇರಿತವಾಗಿ ಅವುಗಳನ್ನು ಮುಚ್ಚಬೇಕು’ ಎಂದರು.

ಕಾಡುಮಲ್ಲೇಶ್ವರ, ಮಲ್ಲೇಶ್ವರ, ರಾಜಾಜಿನಗರ ಪ್ರದೇಶಗಳಲ್ಲಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವ ಮಳಿಗೆಗಳನ್ನು ಪಾಲಿಕೆ ಅಧಿಕಾರಿಗಳು ಗುರುವಾರ
ಪರಿಶೀಲಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !