ಬದಲಾದ ಸ್ಥಳದಲ್ಲಿ ಸಫಾರಿಗೆ ಚಾಲನೆ

ಬುಧವಾರ, ಜೂನ್ 26, 2019
28 °C
ಮೇಲುಕಾಮನಹಳ್ಳಿ ಸಮೀಪದ ಎಸ್‌ಟಿಪಿಎಫ್ ಕ್ವಾಟ್ರಸ್‌ ಬಳಿಯಿಂದ ಸಫಾರಿ

ಬದಲಾದ ಸ್ಥಳದಲ್ಲಿ ಸಫಾರಿಗೆ ಚಾಲನೆ

Published:
Updated:
Prajavani

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿದ್ದ ಸಫಾರಿ ಸ್ಥಳವನ್ನು ಮೇಲುಕಾಮನಹಳ್ಳಿ ಸಮೀಪದ ಎಸ್‌ಟಿಪಿಎಫ್ ಕ್ವಾಟ್ರಸ್‌ ಬಳಿಗೆ ಬದಲಾಯಿಸಿದ್ದು, ಇದಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಶಾಸಕ ಸಿ.ಎಸ್.ನಿರಂಜನಕುಮಾರ್ ಸಫಾರಿಗೆ ಚಾಲನೆ ನೀಡಿದರು. ಸಫಾರಿಗೆ ತೆರಳುವ ಪ್ರವಾಸಿಗರಿಗೆ ಟಿಕೆಟ್‌ ವಿತರಣೆ ಮಾಡಿದರು. ಅ‌ನೇಕ ಪ್ರವಾಸಿಗರು ಹೊಸದಾಗಿ ತೆರೆದಿರುವ ಕೌಂಟರ್‌ನಲ್ಲಿ ಟಿಕೆಟ್‌ ಪಡೆದು ಸಫಾರಿಗೆ ಹೋಗಿ ಬಂದರು.

ಹೊಸ ಕೌಂಟರ್‌ ಪ್ರಾಂಗಣದ ಮುಖ್ಯದ್ವಾರದಲ್ಲಿ ದೊಡ್ಡ ಗಾತ್ರದ ನಾಮಫಲಕ ಅಳವಡಿಸದ ಕಾರಣ ಅನೇಕ ಪ್ರವಾಸಿಗರು ಎಂದಿನಂತೆ ಬಂಡೀಪುರಕ್ಕೆ ತೆರಳಿದ್ದರು. ಸಿಬ್ಬಂದಿಯು ಮಧ್ಯಾಹ್ನದ ಹೊತ್ತಿಗೆ ಹೊಸ ನಾಮಫಲಕವನ್ನು ಅಳವಡಿಸಿದರು.

ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿ.ಎಸ್.ನಿರಂಜನಕುಮಾರ್ ಹೇಳಿದರು.

‌ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಮಾತನಾಡಿ, ‘ಬಂಡೀಪುರದಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು. ವಾಹನಗಳ ನಿಲುಗಡೆಗೂ ತೊಂದರೆಯಾಗುತ್ತಿತ್ತು. ಬಂಡೀಪುರದಿಂದ ಮೇಲುಕಾಮನಹಳ್ಳಿವರೆಗೂ ಕಾಡು ಪ್ರಾಣಿಗಳ ಓಡಾಟ ಹೆಚ್ಚಿರುತ್ತದೆ. ಸಫಾರಿಗೆ ಬರುವ ವಾಹನಗಳು ಸಂಜೆ ಮತ್ತು ಬೆಳಿಗ್ಗೆ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ಪ್ರಾಣಿಗಳಿಗೂ ತೊಂದರೆಯಾಗುತ್ತಿತ್ತು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಟುವಟಿಕೆಗಳು ಹೆಚ್ಚಿರಬಾರದು ಎಂಬ ಉದ್ದೇಶದಿಂದ ಮೇಲುಕಾಮನಹಳ್ಳಿ ಬಳಿಗೆ ಸಫಾರಿ ಸ್ಥಳವನ್ನು ಬದಲಾಯಿಸಲಾಗಿದೆ. ಅವಶ್ಯವಿದ್ದರೆ ಬಂಡೀಪುರದಲ್ಲಿ ಇರುವ ವಸತಿ ಗೃಹಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುವುದು’ ಎಂದು ತಿಳಿಸಿದರು.

ಸಹಾಯಕ ಸಂರಕ್ಷಣಾಧಿಕಾರಿಗಳಾದ ಪರಮೇಶ್, ರವಿಕುಮಾರ್, ನಟರಾಜ್, ವಲಯ ಅರಣ್ಯ ಅಧಿಕಾರಿಗಳಾದ ಶೈಲೇಂದ್ರ ಕುಮಾರ್, ಶ್ರೀನಿವಾಸ್ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !