ಸಂಸ್ಕೃತಿಯ ಜೀವಂತ ಪ್ರತೀಕ ‘ಪುಸ್ತಕ’: ಬೈಚಬಾಳ

ಬುಧವಾರ, ಜೂನ್ 19, 2019
26 °C

ಸಂಸ್ಕೃತಿಯ ಜೀವಂತ ಪ್ರತೀಕ ‘ಪುಸ್ತಕ’: ಬೈಚಬಾಳ

Published:
Updated:
Prajavani

ವಿಜಯಪುರ: ‘ಕನ್ನಡ ಭಾಷೆ ಅತ್ಯುತ್ತಮ ಸಾಂಸ್ಕೃತಿಕ ಪರಂಪರೆ ಹೊಂದಿದೆ. ದೇಶದ ಹಲವು ದಿಕ್ಕಿನಿಂದ ಬಂದ ಸಂತರು, ಸಾಹಿತಿಗಳು ತಮ್ಮ ಮೂಲಭಾಷೆ ಬಿಟ್ಟು ಕನ್ನಡದಲ್ಲಿ ಸಾಹಿತ್ಯ ರಚಿಸುವ ಮೂಲಕ ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಸಾಹಿತಿ ಶಂಕರ ಬೈಚಬಾಳ ಅಭಿಪ್ರಾಯಪಟ್ಟರು.

ನಗರದ ಈಶ್ವರ ಮಂದಿರ ಸಾಂಸ್ಕೃತಿಕ ಭವನದಲ್ಲಿ ಈಚೆಗೆ ಚಿನ್ಮಯ ಪ್ರಕಾಶನ ಅಥಣಿ, ಕನ್ನಡ ಪರಿಷತ್‌ ವಿಜಯಪುರ ವತಿಯಿಂದ ನಡೆದ ಜಿಲ್ಲಾ ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಂಗ್ಲಿಷ್ ಭಾಷೆಯಲ್ಲಿ ಭಾರತದ ಸಂಬಂಧಗಳಿಗೆ ಪದಗಳೇ ಇಲ್ಲ. ಸಣ್ಣವ್ವ, ದೊಡ್ಡವ್ವ, ಅತ್ತಿ, ಅತ್ತಿಗೆ ಎಲ್ಲದಕ್ಕೂ ಅಂಟಿ ಒಂದೇ ಪದ. ಕನ್ನಡ ಭಾಷೆ ಮನೆಯ ಹೆಬ್ಬಾಗಿಲು, ಉಳಿದ ಭಾಷೆಗಳು ಒಳ ಬಾಗಿಲುಗಳಿದ್ದಂತೆ. ಪುಸ್ತಕಗಳು ಆಯಾ ಕಾಲದ ಸಂಸ್ಕೃತಿಯ ಜೀವಂತ ಪ್ರತೀಕ. ಅವು ಬೇಕಾದ ಹೊತ್ತಿನಲ್ಲಿ, ಸ್ಥಳದಲ್ಲಿ ತಿಳಿವಳಿಕೆ ನೀಡುವ ಸದಾಸಿದ್ಧ ಜ್ಞಾನನಿಧಿ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಪ್ರಕಾಶನದ ಸಂಘದ ಉಪಾಧ್ಯಕ್ಷ ಡಾ.ಸಿದ್ದಣ್ಣ ಉತ್ನಾಳ, ‘ಪುಸ್ತಕ ಪ್ರಕಟಣೆಗೆ ಸಾಕಷ್ಟು ಅವಕಾಶಗಳಿದ್ದರೂ, ಪ್ರಕಾಶನಗಳು ವ್ಯಾಪಾರಿ ಸಂಸ್ಥೆಗಳಾಗಿ ಮಾರ್ಪಾಡಾಗುತ್ತಿರುವುದು ಬೇಸರದ ಸಂಗತಿ. ಲೇಖಕರ ಪ್ರಕಾರ ಮತ್ತು ಓದುಗರ ಸಂಬಂಧ ಗಟ್ಟಿಗೊಳ್ಳುವ ಕಾರ್ಯ ಆಗಬೇಕಿದೆ’ ಎಂದರು.

ಬಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಣ್ಣಪ್ಪ ಮೇಟಿಗೌಡ, ಸೋಮಶೇಖರ ಸೊಗಲದ, ಮಹಾಂತ ಗುಲಗಂಜಿ, ಸಿದ್ದಲಿಂಗಪ್ಪ ಬೀಳಗಿ, ಡಾ.ಮಲ್ಲಿಕಾರ್ಜುನ ಮೇತ್ರಿ, ಸಿದ್ದಲಿಂಗಪ್ಪ ಹದಿಮೂರು, ದಾನೇಶ ಅವಟಿ, ಎಸ್.ಕೆ.ಹೊಳೆಪ್ಪನವರ, ಡಾ.ಅರುಣಕುಮಾರ ರಾಜಮಾನೆ, ಎಸ್.ವೈ.ಬಿರಾದಾರ, ವಿಜುಗೌಡ ಕಾಳಶೆಟ್ಟಿ ಇದ್ದರು. ಸೋನಾ ದೊಸಿಂಗೆ ನಿರೂಪಿಸಿದರು. ಮಹಾಂತೇಶ ಪಾಟೀಲ ಸ್ವಾಗತಿಸಿದರು. ಅಶೋಕ ಅಂಬಾಜಿ ವಂದಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !