ಮಂಗಳವಾರ, ನವೆಂಬರ್ 12, 2019
28 °C

ಬುಕರ್‌ ಪ್ರಶಸ್ತಿ ಪಟ್ಟಿಯಲ್ಲಿ ರಶ್ದಿ ಕಾದಂಬರಿ

Published:
Updated:
Prajavani

ಲಂಡನ್‌ (ಪಿಟಿಐ): 2019ನೇ ಸಾಲಿನ ಬುಕರ್‌ ಪ್ರಶಸ್ತಿ ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಬ್ರಿಟನ್‌ ಮೂಲದ ಭಾರ ತೀಯ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರ ಕೃತಿ ‘ಕಿಶೋಟೆ’ (Quichotte) ಸ್ಥಾನಪಡೆದಿದೆ.

ರಶ್ದಿ ಕೃತಿಯೊಂದಿಗೆ ಮಾರ್ಗರೇಟ್ ಅಟ್‌ವುಡ್, ಲೂಸಿ ಎಲ್ಮನ್, ಬರ್ನಾ ರ್ಡಿನ್ ಎವಾರಿಸ್ಟೊ, ಚಿಗೊಜಿ ಒಬಿ ಯೋಮಾ ಮತ್ತು ಎಲಿಫ್ ಶಫಾಕ್ ಅವರ ಕೃತಿಗಳೂ ಸ್ಥಾನ ಪಡೆದಿದ್ದು, ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. 

‘ಅಂತಿಮ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಎಲ್ಲ ಕೃತಿಗಳೂ ಮಾನವೀಯತೆಯನ್ನು ಸಂಭ್ರಮಿಸುವ ಎಲ್ಲರ ಜೀವನದ ಭಾಗಗಳಂತೆ ಇವೆ’ ಎಂದು ಆಯ್ಕೆ ಸಮಿತಿ ಸದಸ್ಯ, ಸಾಹಿತಿ ಪೀಟರ್‌ ಫ್ಲಾರೆನ್ಸ್ ಬಣ್ಣಿಸಿದ್ದಾರೆ. 

ನಾಮ ನಿರ್ದೇಶನಗೊಂಡಿದ್ದ 151 ಕಾದಂಬರಿಗಳಲ್ಲಿ ಈ ಆರು ಸಾಹಿತಿಗಳ ಕೃತಿಗಳು ಅಂತಿಮ ಪಟ್ಟಿಯಲ್ಲಿವೆ. 72 ವರ್ಷದ ರಶ್ದಿ ಅವರ ‘ಮಿಡ್ಸ್‌ನೈಟ್ಸ್‌ ಚಿಲ್ಡ್ರನ್‌’ ಕೃತಿಗೆ 1981ರಲ್ಲಿ ಬುಕರ್‌ ಪ್ರಶಸ್ತಿ ಲಭಿಸಿತ್ತು. 

ಪ್ರಶಸ್ತಿಯು ₹ 43 ಲಕ್ಷ ನಗದು ಹಾಗೂ ಪ್ರಶಸ್ತಿ ಪುರಸ್ಕೃತ ಕೃತಿಯ ವಿಶೇಷ ಮುದ್ರಣವನ್ನು ಒಳಗೊಂಡಿ
ರುತ್ತದೆ. ವಿಜೇತರ ಹೆಸರನ್ನು ಅ. 14ರಂದು ಘೋಷಿಸಲಾಗುತ್ತದೆ. 

 

ಪ್ರತಿಕ್ರಿಯಿಸಿ (+)