ಭಾನುವಾರ, ನವೆಂಬರ್ 17, 2019
28 °C

ಬಾಲಿವುಡ್‌ನಲ್ಲಿ ಸಂದೀಪ್‌ ರೆಡ್ಡಿ ನೆಲೆ?

Published:
Updated:
Prajavani

‘ಅರ್ಜುನ್ ರೆಡ್ಡಿ’ ಸಿನಿಮಾ ಬಾಲಿವುಡ್‌ನಲ್ಲಿ ರಿಮೇಕ್‌ ಆಗುವ ಮೂಲಕ
ಹಿಟ್‌ ಆಗಿತ್ತು. ಈಗ ಈ ಸಿನಿಮಾದ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ, ಬಿ–ಟೌನ್‌ನಲ್ಲಿಯೇ ನೆಲೆವೂರಲಿರುವುದು
ಬಹುತೇಕ ಖಚಿತಗೊಂಡಿದೆ.

ದಕ್ಷಿಣ ಭಾರತದಲ್ಲಿ ಹಿಟ್ ಆಗಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾ ಬಾಲಿವುಡ್‌ನಲ್ಲಿ ‘ಕಬೀರ್ ಸಿಂಗ್‌’ ಹೆಸರಿನಲ್ಲಿ ಬಿಡುಗಡೆಯಾಗಿ, ಉತ್ತರ ಭಾರತದ ಪ್ರೇಕ್ಷಕರ ಮನ ಗೆದ್ದಿತ್ತು. ಈ ಎರಡೂ ಸಿನಿಮಾಗಳನ್ನು ಸಂದೀಪ್‌ ನಿರ್ದೇಶಿಸಿದ್ದರು. ಶಾಹಿದ್ ಕಪೂರ್‌, ಕಿಯಾರಾ ಅಡ್ವಾಣಿ ನಟನೆಗೂ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಈ ಸಿನಿಮಾದ ಯಶಸ್ಸಿನಿಂದ ಸಾಕಷ್ಟು ದಕ್ಷಿಣ ಭಾರತದ  ಪ್ರತಿಭೆಗಳಿಗೆ ಬಾಲಿವುಡ್‌ನಿಂದ ಕರೆ ಬಂದಿತ್ತು.

ಸಂದೀಪ್‌ ರೆಡ್ಡಿ ಬಾಲಿವುಡ್‌ನಲ್ಲಿ ತಮ್ಮ ಎರಡನೇ ಸಿನಿಮಾ ನಿರ್ದೇಶಿಸಲು ಸಿದ್ದತೆ ನಡೆಸಿದ್ದಾರೆ. ಕಬೀರ್ ಸಿಂಗ್ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸಂಸ್ಥೆಯೇ ಇವರಿಗೆ ಮತ್ತೊಂದು ಅವಕಾಶ ನೀಡಿದೆ ಎಂಬ ಸುದ್ದಿ ಬಿ–ಟೌನ್‌ನಲ್ಲಿ ಕೇಳಿಬರುತ್ತಿದೆ.

ನೈಜ ಘಟನೆಯಾಧಾರಿತ ಸಿನಿಮಾಕ್ಕಾಗಿ ಈಗಾಗಲೇ ಸ್ಕ್ರಿಪ್ಟ್ ಸಿದ್ದಗೊಂಡಿದೆ. ನಟ, ನಟಿಯರ ಆಯ್ಕೆ ಅಂತಿಮಗೊಂಡಿಲ್ಲ. ಹಾಗೆಯೇ ಸಿನಿಮಾಕ್ಕೆ ಸೂಕ್ತವಾದ ಹೆಸರಿಟ್ಟ ನಂತರ ಅಧಿಕೃತವಾಗಿ ಪ್ರಕಟಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಪ್ರತಿಕ್ರಿಯಿಸಿ (+)