‘ಸಂಕ್ರಾಂತಿ ಸ್ಪೆಷಲ್’ ಚಾಕ್ಲೆಟ್

7

‘ಸಂಕ್ರಾಂತಿ ಸ್ಪೆಷಲ್’ ಚಾಕ್ಲೆಟ್

Published:
Updated:
Prajavani

ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಚಾಕ್ಲೆಟ್ ಜಂಕ್ಷನ್‌ ಮಳಿಗೆ ‘ಸಂಕ್ರಾಂತಿ ಸ್ಪೆಷಲ್’ ಚಾಕ್ಲೆಟ್  ತಯಾರಿಸಿದೆ.

‘ಸಂಕ್ರಾಂತಿ ಸ್ಪೆಷಲ್’ ಚಾಕ್ಲೆಟ್‌ ಬಾಕ್ಸ್‌ನ ಜೊತೆಗೆ ಸಂಕ್ರಾಂತಿಯ ವಿಶೇಷ ತಿನಿಸಾದ ಎಳ್ಳು, ಬೆಲ್ಲ, ಕೊಬ್ಬರಿ, ಸಕ್ಕರೆ ಅಚ್ಚು ಇದೆ. ಜೊತೆಗೆ ಚಾಕ್ಲೆಟ್‌ನಿಂದ ತಯಾರಿಸಿದ ವಿಶೇಷವೆನಿಸುವ ಕಬ್ಬು ಹಾಗೂ ರಾಯಲ್ ರೋಷನ್‌ ಚಾಕ್ಲೆಟ್ ಉಂಡೆಗಳಿವೆ. ಇದಕ್ಕೆಂದೇ ವಿಶೇಷ ಬಾಕ್ಸ್ ತಯಾರಿಸಲಾಗಿದೆ.

‘ಸಾವಿರಕ್ಕೂ ಅಧಿಕ ವಿನ್ಯಾಸದ ಚಾಕ್ಲೆಟ್‌ಗಳು ಚಾಕ್ಲೆಟ್‌ ಜಂಕ್ಷನ್‌ನಲ್ಲಿ ಲಭ್ಯ. ಗ್ರಾಹಕರೊಬ್ಬರ ಬೇಡಿಕೆಯಂತೆ ಈ ಬಾರಿ ‘ಸಂಕ್ರಾಂತಿ ಸ್ಪೆಷಲ್’ ಚಾಕ್ಲೆಟ್ ತಯಾರಿಸಿದ್ದೇವೆ. ಅದರ ಬೆಲೆ ₹ 421. ಈ ಬಗ್ಗೆ ತಿಳಿದ ಬೇರೆ ಗ್ರಾಹಕರಿಂದ ಬೇಡಿಕೆ ಬರುತ್ತಿದೆ’ ಎನ್ನುತ್ತಾರೆ ಚಾಕ್ಲೆಟ್ ಜಂಕ್ಷನ್‌ ಮಾಲೀಕರಾದ ಅನುಪಮಾ ಅಮರ್‌ನಾಥ್.

‘ಗ್ರಾಹಕರ ಬೇಡಿಕೆಗನುಗುಣವಾಗಿ ವಿವಿಧ ವಿನ್ಯಾಸದ ಚಾಕ್ಲೆಟ್‌ಗಳನ್ನು ನಾವೇ ತಯಾರಿಸಿಕೊಡುತ್ತೇವೆ. ಅದಕ್ಕಾಗಿ ನಮ್ಮಲ್ಲಿ ನುರಿತ ಚಾಕ್ಲೆಟ್ ತಯಾರಕರು ಮತ್ತು ವಿನ್ಯಾಸಕರಿದ್ದಾರೆ. ‘ಪ್ರಿಂಟೆಡ್ ಚಾಕ್ಲೆಟ್‌’, ನಮ್ಮಲ್ಲಿ ದೊರೆಯುವ ವಿಶೇಷ ಚಾಕ್ಲೆಟ್. ಅದಕ್ಕೇ ಯುವಕ, ಯುವತಿಯರೇ ಹೆಚ್ಚಾಗಿ ಬೇಡಿಕೆ ಸಲ್ಲಿಸುತ್ತಾರೆ’ ಎನ್ನುತ್ತಾರೆ ಅವರು.

‘ಹುಟ್ಟುಹಬ್ಬ, ಸಭೆ ಸಮಾರಂಭಗಳಿಗಾಗಿಯೇ ವಿಶೇಷವಾದ ಚಾಕ್ಲೆಟ್‌ಗಳನ್ನು ತಯಾರಿಸುತ್ತೇವೆ. ನಾವು ತಯಾರಿಸುವ ಚಾಕ್ಲೆಟ್‌ಗಳ ಗಾತ್ರಕ್ಕನುಗುಣವಾಗಿ ವಿಶೇಷ ಕವರ್‌ಗಳನ್ನು ಸಿದ್ಧಪಡಿಸಿ ಅದರೊಂದಿಗೆ ಚಾಕ್ಲೆಟ್‌ಗಳನ್ನು ಮಾರುತ್ತೇವೆ. ವಿಶೇಷ ಸಂದರ್ಭಗಳಿಗೆ ಉಡುಗೊರೆ ನೀಡಲು ತರಹೇವಾರಿ ಚಾಕ್ಲೆಟ್‌ಗಳು ಲಭ್ಯ’ ಎಂದರು.

ಸ್ಥಳ: ಚಾಕ್ಲೆಟ್ ಜಂಕ್ಷನ್, ಅಣ್ಣ ಮೊದಲಿಯಾರ್ ರಸ್ತೆ, ಹಲಸೂರು ಕೆರೆ ಎದುರು. ಸಂಪರ್ಕ: 9845019639

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !