‘ಸಂಸ್ಕೃತ ಸಾಹಿತ್ಯದ ವಿಸ್ತಾರ ಅಗಾಧ’

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕಿ ಸುಧಾಮೂರ್ತಿ ಅಭಿಮತ

‘ಸಂಸ್ಕೃತ ಸಾಹಿತ್ಯದ ವಿಸ್ತಾರ ಅಗಾಧ’

Published:
Updated:
Prajavani

ಬೆಂಗಳೂರು: ‘ಸಂಸ್ಕೃತ ಸಾಹಿತ್ಯದ ವಿಸ್ತಾರ ಲ್ಯಾಟಿನ್‌ ಹಾಗೂ ಗ್ರೀಕ್‌ ಭಾಷೆಗಳ ಎರಡು ಪಟ್ಟು ಪುಸ್ತಕಗಳಿಗೆ ಸಮ’ ಎಂದು ಲೇಖಕಿ ಸುಧಾಮೂರ್ತಿ ಅಭಿಪ್ರಾಯಪಟ್ಟರು.

ಸಂಸ್ಕೃತ ಭಾರತಿ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲೇಖಕ ಶತಾವಧಾನಿ ರಾ.ಗಣೇಶ್‌ ಅವರು ಅನುವಾದಿಸಿದ ‘ಮಹಾ ಬ್ರಾಹ್ಮಣ’ ಸಂಸ್ಕೃತ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಎಲ್ಲ ಭಾಷೆಗಳಲ್ಲಿ ವಿಸ್ತೃತವಾಗಿ ಸಾಹಿತ್ಯ ಬೆಳೆಯಲು ಮೂಲ ಬೇರು ಸಂಸ್ಕೃತ ಸಾಹಿತ್ಯ. ಸಂಸ್ಕೃತ ಭಾಷೆ ಶ್ವಾಸವನ್ನು ಶುದ್ಧೀಕರಿಸುವ ಭಾಷೆ’  ಎಂದರು.

ಮಕ್ಕಳಿಗೆ ಕಾಳಿದಾಸ ಯಾರು ಎಂದು ಕೇಳಿದರೆ, ಗೂಗಲ್‌ ಮಾಡಿ ಎನ್ನುತ್ತವೆ. ನಿಮ್ಮ ಮಕ್ಕಳಿಗೆ ಸಂಸ್ಕೃತಿ ಕಲಿಸಿ’ ಎಂದರು.

‘ನಮ್ಮತನ ಹಾಗೂ ನಮ್ಮ ಸಂಸ್ಕೃತಿಯ ವಿಸ್ಮೃತಿಯಾಗುತ್ತಿರುವ ಈ ಸಂದರ್ಭದಲ್ಲಿ ಸಂಸ್ಕೃತವನ್ನು ಕಲಿಸುವ ಮೂಲಕ ಕಾಳಿದಾಸ ಹಾಗೂ ಇತರೆ ಕವಿಗ
ಳನ್ನು ಮಕ್ಕಳಿಗೆ ತಲುಪಿಸಬೇ ಕಾದ ಅಗತ್ಯವಿದೆ.

ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಚಿಕ್ಕ ಪ್ರಮಾಣ ದಲ್ಲಿ ಈ ಕೆಲಸ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಸಂಸ್ಕೃತ ಭಾಷೆಯ ಬೆಳವಣಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಅದರ ಬೆಳವಣಿಗೆಗೆ ನಮ್ಮ ಪ್ರತಿಷ್ಠಾನದ ವತಿಯಿಂದ ₹10 ಲಕ್ಷ ನೀಡಲಾಗುವುದು’ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !