ಸಾರ್ವಜನಿಕರ ಸಹಭಾಗಿತ್ವ ಅಗತ್ಯ:ಪ್ರೊ.ಜಿ.ಎಸ್.ಜಯದೇವ ಅಭಿಮತ

ಬುಧವಾರ, ಜೂನ್ 19, 2019
31 °C

ಸಾರ್ವಜನಿಕರ ಸಹಭಾಗಿತ್ವ ಅಗತ್ಯ:ಪ್ರೊ.ಜಿ.ಎಸ್.ಜಯದೇವ ಅಭಿಮತ

Published:
Updated:
Prajavani

ಚಾಮರಾಜನಗರ: ‘ಗಿಡಗಳನ್ನು ನೆಟ್ಟು, ಬೆಳೆಸಿ ಪರಿಸರ ಸಂರಕ್ಷಿಸುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅಭಿಪ್ರಾಯಪಟ್ಟರು.

ನಗರದ ದೀನಬಂಧು ಟ್ರಸ್ಟ್ ಮತ್ತು ರಾಮಸಮುದ್ರ ಗ್ರಾಮಸ್ಥರ ಸಹಯೋಗದೊಂದಿಗೆ ಬುಧವಾರ ಗಿಡಗಳನ್ನು ನೆಡುವ ಯೋಜನೆಗೆ ರಾಮಸಮುದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಥಮ ಹಂತವಾಗಿ ರಾಮಸಮುದ್ರದ ಸಾರ್ವಜನಿಕರ ಸಹಯೋಗದಡಿ ಗಿಡಗಳನ್ನು ನೆಡಲಾಗುತ್ತಿದೆ. ಮುಂದಿನ ಹಂತದಲ್ಲಿ ಸಮೀಪದ ಬಡಾವಣೆಯ ಮನೆಗಳ ಮುಂಭಾಗ ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗುವುದು. ಸಾರ್ವಜನಿಕರೇ ಗಿಡಗಳನ್ನು ಬೆಳೆಸುವ ಜವಾಬ್ದಾರಿ ವಹಿಸಿಕೊಂಡು ಪೋಷಿಸಲು ಮುಂದಾಗಬೇಕು. ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಎಲ್ಲರ ಹೊಣೆ ಎಂದರು. 

ಪ್ರಥಮ ಹಂತವಾಗಿ ರಾಮಸಮುದ್ರದ ಸಾರ್ವಜನಿಕರ ಸಹಯೋಗದೊಂದಿಗೆ ಬಾಗೆಮರ ಹಾಗೂ ತಿಬ್ಬಳ್ಳಿ ಕಟ್ಟೆಯಲ್ಲಿ ಗಿಡಗಳನ್ನು ನೆಡಲಾಯಿತು. ರಸ್ತೆ ವಿಸ್ತರಣೆಗಾಗಿ ಡಾ.ಅಂಬೇಡ್ಕರ್ ಪ್ರತಿಮೆ ಬಳಿ, ರಾಮಸಮುದ್ರದ ಹೆಗ್ಗುರಾತಾಗಿದ್ದ ಬಾಗೆ ಮರವನ್ನು ಕಡಿದು ಹಾಕಲಾಗಿತ್ತು. ಆದ್ದರಿಂದ, ಅದೇ ಸ್ಥಳದಲ್ಲಿ ಬಾಗೆ ಗಿಡವನ್ನೇ ನೆಡುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು.

ರಾಮಸಮುದ್ರದ ದೊಡ್ಡಬೀದಿಯ ಯಜಮಾನರಾದ ಚನ್ನಂಜಯ್ಯ, ನಂಜಯ್ಯ, ಶಿವನಂಜಯ್ಯ, ನಗರಸಭಾ ಸದಸ್ಯ ಪ್ರಕಾಶ್ ಬಾಗೆ ಗಿಡ ನೆಟ್ಟು ನೀರೆರೆದರು. ಬಳಿಕ ತಿಬ್ಬಳ್ಳಿ ಕಟ್ಟೆಯ ಬಳಿ ಅರಳಿಗಿಡ ನೆಡಲಾಯಿತು. ಕಿರುತೆರೆ ನಟ ಸುನೀಲ್, ಮುಖ್ಯಶಿಕ್ಷಕ ಪ್ರಕಾಶ್, ದೈಹಿಕ ಶಿಕ್ಷಕ ಗುರುಸಿದ್ದಯ್ಯ, ಸುನೀಲ್‌ ಇದ್ದರು.

 ಪರಿಸರ ದಿನಾಚರಣೆ: ತಾಲ್ಲೂಕಿನ ಬೋಗಾಪುರ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಹಾಗೂ ವಿಶ್ವ ಪರಿಸರ ದಿನವನ್ನು ಕಸ್ತೂರು ಬಂಡಿ ಜಾತ್ರೆ ಮಾಳದಲ್ಲಿ ಸಸಿಗಳನ್ನು ನೆಟ್ಟು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸುವ ಮೂಲಕ ಮಂಗಳವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 

ಪರಿಸರ ಸ್ವಚ್ಛತಾ ಆಂದೋಲನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಚಾಲನೆ ನೀಡಿ ಮಾತನಾಡಿ, ‘ಪರಿಸರ ಸಂರಕ್ಷಣೆ ಮಾಡಲು ನಾವೆಲ್ಲರೂ ಬದ್ಧರಾಗೋಣ. ಮರ ಕಡಿಯುವುದು ಸುಲಭ. ಬೆಳೆಸಿ ಸಂರಕ್ಷಿಸುವುದು ಮುಖ್ಯ. ಹೀಗಾಗಿ, ಗಿಡಗಳನ್ನು ಬೆಳೆಸಬೇಕು. ಉತ್ತಮವಾದ ಪರಿಸರವನ್ನು ಪಡೆದುಕೊಳ್ಳೋಣ. ನಮ್ಮ ಮುಂದಿನ ಪೀಳಿಗೆಗೂ ಉತ್ತಮವಾದ ಪರಿಸರವನ್ನು ಕೊಡುಗೆಯಾಗಿ ನೀಡುವುದು ಎಲ್ಲರ ಜವಾಬ್ದಾರಿ’ ಎಂದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ರವಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀಲಮ್ಮ, ಪಿಡಿಒ ಸವಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವಪ್ಪ, ಕುಮಾರಸ್ವಾಮಿ, ಓಡಿಪಿ ಸಂಘದ ಜಯರಾಮ್, ಜೋಸೆಫ್, ರೇಖಾ, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು. ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !