ಸೋಮವಾರ, ಮಾರ್ಚ್ 8, 2021
27 °C

‘ಕೆರೆಗಳನ್ನು ಉಳಿಸಿಕೊಳ್ಳಲು ಶ್ರಮ ಹಾಕಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನಗರದ ಕೆರೆಗಳ ಸ್ಥಿತಿ ಸುಧಾರಿಸಬೇಕು. ಇದಕ್ಕಾಗಿ ಅಧಿಕಾರಿಗಳು ಹೆಚ್ಚಿನ ಶ್ರಮ ಹಾಕಬೇಕು’ ಎಂದು ಸಚಿವ ಆರ್‌.ಶಂಕರ್‌ ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ‘ಮಾಲಿನ್ಯ ನಿಯಂತ್ರಣ ಕಾನೂನು ಅನುಷ್ಠಾನ ಕುರಿತ ಎರಡು ದಿನಗಳ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರ ₹ 97 ಕೋಟಿ ನೀಡಿದೆ. ನಗರದಲ್ಲಿ ವಾಹನಗಳು ಉಗುಳುವ ಹೊಗೆಯನ್ನು ನಿಯಂತ್ರಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌, ‘ಮುಂದಿನ ಹತ್ತು ದಿನಗಳ ತರಬೇತಿಯಲ್ಲಿ ಅಧಿಕಾರಿಗಳು ನಗರದ ಪ್ರಮುಖ ಕೈಗಾರಿಕೆಗಳಿಗೆ ತೆರಳಿ ವರದಿ ಸಿದ್ಧಪಡಿಸಲಿದ್ದಾರೆ. ಇದಕ್ಕಾಗಿ ರಾಜ್ಯದ ವಿವಿದೆಡೆಯಿಂದ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ’ ಎಂದರು.

‘43 ಸಾವಿರ ಕೈಗಾರಿಕೆಗಳ ಮಾಲಿನ್ಯದ ಕುರಿತು ನಾನು ಇಲ್ಲಿ ಪರಿಶೀಲನೆ ಮಾಡುತ್ತೇವೆ.  709 ಅಧಿಕಾರಿಗಳ ಜಾಗದಲ್ಲಿ ಶೇ 40ರಷ್ಟು ಹುದ್ದೆಗಳನ್ನು  ಮಾತ್ರ ಭರ್ತಿ ಮಾಡಲಾಗಿದೆ. ಇದರಿಂದ ಒತ್ತಡ ಹೆಚ್ಚಿದೆ. 43 ಅಧಿಕಾರಿಗಳ ನೇಮಕದ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಎಲ್ಲಾ ಖಾಲಿ ಇರುವ ಹುದ್ದೆಗಳು ಭರ್ತಿಯಾದರೆ ಇನ್ನಷ್ಟು ವೇಗವಾಗಿ ಕೆಲಸ ಮಾಡಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘75ರಲ್ಲಿ ಐದು ಕೆರೆಗಳು ಹೆಚ್ಚು ಮಾಲಿನ್ಯ ಹೊಂದಿವೆ. ನಾವು ಕೆರೆಗಳ ನಿರ್ವಹಣೆಯಲ್ಲಿ ಎಡವಿದ್ದೇವೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು