ಸವಿತಾ ಮಹರ್ಷಿ ಜಯಂತ್ಯುತ್ಸವ

7
ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ

ಸವಿತಾ ಮಹರ್ಷಿ ಜಯಂತ್ಯುತ್ಸವ

Published:
Updated:
Prajavani

ಬೆಂಗಳೂರು: ಯಲಹಂಕ ಸವಿತಾ ಸಮಾಜದ ಆಶ್ರಯದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಮತ್ತು ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸ್ಥಳೀಯ ಕಲಾವಿದರು ಹಾಗೂ ಆಕಾಶವಾಣಿ ಕಲಾವಿದರಾದ ಆರ್.ವಿ.ಎಸ್.ಶ್ರೀಕಾಂತ್, ಎ.ವಿವೇಕ್, ಬಿ.
ಶ್ರೀನಿವಾಸ್, ಕರುಣಾಕರ ನಾದಸ್ವರ ಕಛೇರಿ ನಡೆಸಿಕೊಟ್ಟರು.

ಸವಿತಾ ಮಹರ್ಷಿ ಮತ್ತು ತ್ಯಾಗರಾಜ ಸ್ವಾಮಿ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು 108 ಮಂಗಳವಾದ್ಯ ಹಾಗೂ 101 ಕಳಸಗಳು ಹಾಗೂ ಜನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯು ಜನರ ಗಮನ
ಸೆಳೆಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸವಿತಾಪೀಠದ ಶ್ರೀಧರಾನಂದ ಸ್ವಾಮೀಜಿ, ‘24 ಉಪ ಸಮುದಾಯಗಳನ್ನು ಹೊಂದಿರುವ ಸವಿತಾ ಸಮಾಜ, ಕರ್ನಾಟಕ ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡದಿರುವುದು ವಿಷಾದನೀಯ’ ಎಂದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಸವಿತಾ ಸಮಾಜಕ್ಕೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

ಸವಿತಾ ಸಮಾಜದ ರಾಜ್ಯಘಟಕದ ಅಧ್ಯಕ್ಷ ಯು.ಕೃಷ್ಣಮೂರ್ತಿ, ಗೌರವಾಧ್ಯಕ್ಷ ವಿ.ಗಜರಾಜು, ಬಿಬಿಎಂಪಿ ಸದಸ್ಯ ಎಂ.ಸತೀಶ್, ಸಮಾಜದ ಯಲಹಂಕ ಕ್ಷೇತ್ರ ಘಟಕದ ಅಧ್ಯಕ್ಷ ವಿ.ಲಕ್ಷ್ಮೀನಾರಾಯಣ, ಯಲಹಂಕ ನಗರಘಟಕದ ಅಧ್ಯಕ್ಷ ಎನ್.ಕೆ.ಸುನಿಲ್‌ ಕುಮಾರ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !