ಶಿಷ್ಯ ವೇತನ; ಅರ್ಜಿ ಆಹ್ವಾನ

7

ಶಿಷ್ಯ ವೇತನ; ಅರ್ಜಿ ಆಹ್ವಾನ

Published:
Updated:

ವಿಜಯಪುರ: ವೃತ್ತಿ ರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿರುವ ಯುವಕ/ಯುವತಿಯರಿಂದ ಶಿಷ್ಯ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 15 ಯುವಕರಿಗೆ ಶಿಷ್ಯ ವೇತನವನ್ನು 6 ತಿಂಗಳವರೆಗೆ ನೀಡಲಾಗುವುದು. ಶಿಷ್ಯ ವೇತನದ ಮೊತ್ತ ತಿಂಗಳಿಗೆ ₹ 10000. ಆಯ್ಕೆಯಾದ ಅಭ್ಯರ್ಥಿಗಳು 6 ತಿಂಗಳವರೆಗೆ ಅಕಾಡೆಮಿ ಸೂಚಿಸುವ ವೃತ್ತಿ ನಾಟಕ ಕಂಪನಿಯಲ್ಲಿ ಸ್ವಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಊಟ, ವಸತಿಯನ್ನು ಆಯಾ ವೃತ್ತಿ ನಾಟಕ ಕಂಪನಿ ಒದಗಿಸುತ್ತವೆ.

7ನೇ ತರಗತಿ ಓದಿರುವ, ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲ ಇರುವ, 18ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ ಆಸಕ್ತರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೌಖಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ನಾಟಕ ಅಕಾಡೆಮಿ ಕಚೇರಿಗೆ ಬರಬೇಕು.

ಆಸಕ್ತರು ತಮ್ಮ ಸ್ವವಿವರ ಹಾಗೂ ರಂಗಭೂಮಿ ಅನುಭವ ಕುರಿತು ಸ್ವಯಂ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002 ಇಲ್ಲಿಗೆ ಜ.20ರೊಳಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 080–22237484 ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !