ಸ್ಕ್ರೀನ್‌ ಬಳಕೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರದು: ಅಧ್ಯಯನ

ಮಂಗಳವಾರ, ಏಪ್ರಿಲ್ 23, 2019
27 °C

ಸ್ಕ್ರೀನ್‌ ಬಳಕೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರದು: ಅಧ್ಯಯನ

Published:
Updated:
Prajavani

ಲಂಡನ್‌: ಮೊಬೈಲ್‌ನಲ್ಲಿ ಆಟವಾಡುವುದು, ಟಿವಿ ನೋಡುವುದು ಸೇರಿದಂತೆ ಮಲಗುವ ಮುನ್ನ ಹೆಚ್ಚು ಕಾಲ ಸ್ಕ್ರೀನ್‌ನತ್ತ ದೃಷ್ಟಿ ನೆಟ್ಟರೆ ಯುವಜನತೆಯ ಮಾನಸಿಕ ಆರೋಗ್ಯದ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

‘ಸೈಕಾಲಜಿಕಲ್‌ ಸೈನ್ಸ್‌’ ಜರ್ನಲ್‌ನಲ್ಲಿ ಪ್ರಕಟಗೊಂಡ ಈ ಅಧ್ಯಯನ ವರದಿಯು ‘ಸ್ಕ್ರೀನ್‌ನ್ನು ಹೆಚ್ಚು ಕಾಲ ನೋಡುವುದು ಮಾನಸಿಕ ಆರೋಗ್ಯಕ್ಕೆ ಮಾರಕ’ ಎನ್ನುವ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿದೆ.‌

‘ಸ್ಕ್ರೀನ್‌ ಬಳಕೆ ಮತ್ತು ಹದಿಹರೆಯದವರಲ್ಲಿ ಆರೋಗ್ಯ’ ಕುರಿತು ನಡೆದ ಈ ಅಧ್ಯಯನದಲ್ಲಿ 17,000 ಹದಿಹರೆಯದವರಿಂದ ಮಾಹಿತಿ ಕಲೆಹಾಕಲಾಗಿದೆ.

‘ಡಿಜಿಟಲ್‌ ಸ್ಕ್ರೀನ್‌ನ ಬಳಕೆಯು ಹದಿಹರೆಯದವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ನಮಗೆ ಈ ಅಧ್ಯಯನದಲ್ಲಿ ಬಹಳ ವಿರಳ ಪುರಾವೆಗಳು ದೊರೆತಿವೆ’ ಎಂದು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ಅಂತರರಾಷ್ಟ್ರೀಯ ಸಂಸ್ಥೆಯ ಸಂಶೋಧಕ ಆಮಿ ಆರ್ಬೆನ್‌ ಹೇಳಿದ್ದಾರೆ.

‘ಸ್ಕ್ರೀನ್‌ ಬಳಕೆ ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ಅರಿಯಲು ಮನೋವಿಜ್ಞಾನ ಪರಿಣಾಮಕಾರಿ’ ಎಂದು ಆರ್ಬೆನ್‌ ಹೇಳಿದ್ದಾರೆ. 

ಅಧ್ಯಯನಕ್ಕಾಗಿ ಆಯ್ಕೆಯಾದ ಹದಿಹರೆಯದವರು ದಿನದಲ್ಲಿ ಸ್ಕ್ರೀನ್‌ ನೋಡುವಾಗ ವ್ಯಯಿಸುವ ಸಮಯವು ಅವರ ಮಾನಸಿಕ ಆರೋಗ್ಯದ ಮೇಲೆ ಬಹಳ ಕಡಿಮೆ ಪರಿಣಾಮವನ್ನು ಬೀರಿದೆ ಎಂದು ಈ ಅಧ್ಯಯನ ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !