ವಿಧವೆಯರ ದತ್ತಾಂಶ ಕಲೆ ಹಾಕಲು ಸೂಚನೆ

7

ವಿಧವೆಯರ ದತ್ತಾಂಶ ಕಲೆ ಹಾಕಲು ಸೂಚನೆ

Published:
Updated:

ಬೆಂಗಳೂರು: ವಿಧವೆಯರ ಮಾಹಿತಿ ಕಲೆ ಹಾಕುವ ಮೂಲಕ ದತ್ತಾಂಶ ಸಂಗ್ರಹಿಸಲು ಹಾಗೂ ಮಾಸಾಶನ ಪಡೆಯುತ್ತಿರುವವರ ವಿವರ ಒದಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಸೂಚಿಸಿದ್ದಾರೆ.

ಸಂಕಷ್ಟದಲ್ಲಿರುವ ವಿಧವೆಯರಿಗೆ ಗೌರವಯುತ ಬದುಕು ಸಾಗಿಸಲು ಸರ್ಕಾರ ನೆರವು ನೀಡಬೇಕು ಎಂದು ಸರ್ವೋಚ್ಛ ನ್ಯಾಯಲಯ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಪುರುಷರು ಮೃತಪಟ್ಟಾಗ ಅವರ ವೈವಾಹಿಕ ಸ್ಥಾನಮಾನ ಕುರಿತು ಮಾಹಿತಿ ನೀಡುವಂತೆ ಜನನ ಮತ್ತು ಮರಣ ನೋಂದಣಿ ನಿರ್ದೇಶನಾಲಯದ ನಿಬಂಧಕರಿಗೆ ಸೂಚನೆ ನೀಡಲಾಯಿತು.

‘ಪತಿಯ ಮರಣದ 60 ದಿನಗಳ ಒಳಗೆ ಆಕೆಗೆ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಬೇಕು. ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ವಿಮಾ ರಕ್ಷಣಾ ಕಾರ್ಡ್‌ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಬೇಕು. ಜನ್‌ಧನ್‌ ಯೋಜನೆಯಡಿ ಖಾತೆಗಳನ್ನು ತೆರೆಯಲು ಬ್ಯಾಂಕ್‌ಗಳು ವಿಧವೆಯರಿಗೆ ನೆರವಿನ ಹಸ್ತ ನೀಡ
ಬೇಕು. ಕೌಟುಂಬಿಕ ಆಸ್ತಿ ಹಕ್ಕು ಪಡೆಯಲು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಅಗತ್ಯ ನೆರವು ನೀಡಬೇಕು’ ಎಂದು ಅವರು ಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !