‘ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ’

5
ಸಾಮಾಜಿಕ ಮಾಧ್ಯಮಗಳಲ್ಲಿ ಮೈಮರೆತಿರುವ ಮಕ್ಕಳು

‘ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ’

Published:
Updated:
ಕಾರ್ಯಕ್ರಮದಲ್ಲಿ ವೇಟ್‌ ಲಿಫ್ಟರ್‌ ಗುರುರಾಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.(ಎಡದಿಂದ) ಸೇವಾದಳದ ಅಧ್ಯಕ್ಷ ಜಗದೀಶ್, ಎಂ.ವೇದ ಕುಮಾರ್, ಸೇವಾದಳದ ಹಿರಿಯ ಉಪಾಧ್ಯಕ್ಷ ಎಂ.ರಮೇಶ್ ಬಂಗೇರ ಇದ್ದರು - ಪ್ರಜಾವಾಣಿ ಚಿತ್ರ

ಬೆಂಗಳೂರು:‘ಸಾಮಾಜಿಕ ಮಾಧ್ಯಮಗಳಲ್ಲಿ ಮೈಮರೆತಿರುವ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಅಗತ್ಯವಿದೆ’ ಎಂದು ಕಾರ್ಕಳ ಶಾಸಕ ಸುನೀಲ್‌ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಬಿಲ್ಲವ ಅಸೋಶಿಯೇಷನ್‌ ಶನಿವಾರ ಆಯೋಜಿಸಿದ್ದ ಸೇವಾದಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನದಲ್ಲೇ ಮುಳುಗಿರುವ ಯುವ ಜನರು ನಾಡು, ನುಡಿ, ನೆಲದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಂಬಂಧಗಳು ದೂರವಾಗುತ್ತಿವೆ. ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸುವಲ್ಲಿ ಪೋಷಕರು ಹಿಂದೆ ಸರಿಯುತ್ತಿರುವುದು ಬೇಸರದ ಸಂಗತಿ. ತುಳುನಾಡಿನ ಸಂಸ್ಕೃತಿ, ಮೌಲ್ಯಗಳನ್ನು ಬಿಟ್ಟುಕೊಡದೆ, ಉಳಿಸಿಕೊಂಡು ಹೋಗಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು. 

ಅಸೋಶಿಯೇಷನ್‌ನ ಅಧ್ಯಕ್ಷ ಎಂ.ವೇದ ಕುಮಾರ್‌,‘‌ಯುವಜನರು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತರಾಗದೆ, ಎಲ್ಲ ಕ್ಷೇತ್ರಗಳಲ್ಲಿಯೂ ಅಪ್ರತಿಮ ಸಾಧನೆಗಳನ್ನು ಮಾಡುವ ಮೂಲಕ ಸಮುದಾಯವನ್ನು ಪ್ರತಿನಿಧಿಸಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕು’ ಎಂದು ಹೇಳಿದರು. 

ಲೋಕನಾಥ್‌, ಸುರೇಶ್‌ ಕರ್ಕೇರ‌ ಮತ್ತು ಕುಮಾರ್‌ ಕೋಟ್ಯಾನ್‌ ಅವರನ್ನು ಸನ್ಮಾನಿಸಲಾಯಿತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !