ಸೋಮವಾರ, ನವೆಂಬರ್ 18, 2019
20 °C
ಹುಡುಗಿ ಹೆಸರಿನಲ್ಲಿ ಖಾತೆ ತೆರೆದು ಕೃತ್ಯ

ಎಸ್ಸೆಸ್ಸೆಲ್ಸಿ ಸಹಪಾಠಿಗೆ ಲೈಂಗಿಕ ಕಿರುಕುಳ: ವ್ಯಕ್ತಿಯ ಬಂಧನ

Published:
Updated:
Prajavani

ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಸಹಪಾಠಿಯಾಗಿದ್ದ ಯುವತಿಗೆ ಅಶ್ಲೀಲ ಸಂದೇಶ ಹಾಗೂ ಫೋಟೊ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಎಚ್‌.ಎಸ್. ಪ್ರಶಾಂತ್ (26) ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ಹೆಬ್ಬಗೋಡಿಯ ತಿರುಪಾಳ್ಯದ ಪ್ರಶಾಂತ್, ಜನವರಿಯಿಂದಲೇ ಯುವತಿಗೆ ಕಿರುಕುಳ ನೀಡುತ್ತಿದ್ದ. ಆ ಸಂಬಂಧ ದಾಖಲಾಗಿದ್ದ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿ ಕೊಂಡ’ ಎಂದು ಪೊಲೀಸರು ಹೇಳಿದರು.

ಹುಡುಗಿ ಹೆಸರಿನಲ್ಲಿ ಖಾತೆ: ‘ಕಲ್ಪನ ರುಕ್ಕು’ ಎಂಬ ಹೆಸರಿನಲ್ಲಿ ಫೇಸ್‌ ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ಅದರ ಮೂಲಕ ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಹುಡುಗಿ ಇರಬಹುದೆಂಬ ಕಾರಣಕ್ಕೆ ಯುವತಿ ರಿಕ್ವೆಸ್ಟ್ ಸ್ವೀಕ ರಿಸಿದ್ದರು’ ಎಂದರು.

‘ಯುವತಿ ಜೊತೆ ಚಾಟಿಂಗ್ ಮಾಡಲಾರಂಭಿಸಿದ್ದ ಆರೋಪಿ, ಅಶ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ಫೋಟೊಗಳನ್ನು ಕಳುಹಿಸಲಾರಂಭಿಸಿದ್ದ. ತನ್ನ ಜೊತೆ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಲಾರಂಭಿಸಿದ್ದ. ಎಸ್ಸೆಸ್ಸೆಲ್ಸಿಯಿಂದಲೇ ಯುವತಿ ಜೊತೆ ಸಲುಗೆ ಬೆಳೆಸಲು ಆರೋಪಿ ಯತ್ನಿ ಸುತ್ತಿದ್ದ. ಆತನಿಗೆ ಯುವತಿ ಎಚ್ಚರಿಕೆ ನೀಡಿದ್ದಳು’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)