ಹೂಡಿಕೆಯ ಅರಿವು ಮೂಡಿಸುವ ಷೇರ್‌ಖಾನ್‌

7

ಹೂಡಿಕೆಯ ಅರಿವು ಮೂಡಿಸುವ ಷೇರ್‌ಖಾನ್‌

Published:
Updated:
ಷೇರ್‌ಖಾನ್‌ ಸಿಇಒ ಜೈದೀಪ್‌ ಅರೋರಾ

ಬಿಎನ್‌ಪಿ ಪರಿಬಾಸ್‌ನ ಅಂಗಸಂಸ್ಥೆಯಾಗಿರುವ ಷೇರ್‌ಖಾನ್‌, ಆನ್‌ಲೈನ್‌ ವಹಿವಾಟಿನ ದಲ್ಲಾಳಿ ಸಂಸ್ಥೆಯಾಗಿದ್ದು ಉಳಿತಾಯ, ಹೂಡಿಕೆ, ಷೇರು ವಹಿವಾಟು, ಖಾತೆ ನಿರ್ವಹಣೆ, ಸಂಶೋಧನೆ, ಮ್ಯೂಚುವಲ್‌ ಫಂಡ್ಸ್‌, ಹೂಡಿಕೆದಾರರಿಗೆ ತರಬೇತಿ ಮತ್ತಿತರ ಸೇವೆ ಒದಗಿಸುತ್ತಿದೆ.

‘ಸಂಸ್ಥೆಯ ವಹಿವಾಟಿನಲ್ಲಿ ಬೆಂಗಳೂರು ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. 1.25 ಲಕ್ಷಕ್ಕೂ ಹೆಚ್ಚಿನ ನಮ್ಮ ಗ್ರಾಹಕರ ಷೇರು ವಹಿವಾಟು ಮತ್ತು ಹೂಡಿಕೆ ಅಗತ್ಯಗಳನ್ನು ಈಡೇರಿಸಲು ಸಂಸ್ಥೆಯು ವ್ಯಾಪಕ ಬಗೆಯ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ. 2020ರ ವೇಳೆಗೆ ನಗರದಲ್ಲಿನ ಸಂಸ್ಥೆಯ ಗ್ರಾಹಕರ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಸಿಇಒ ಜೈದೀಪ್‌ ಅರೋರಾ ಹೇಳಿದ್ದಾರೆ.

ಸಂಸ್ಥೆಯ ತಂತ್ರಜ್ಞಾನ ವ್ಯಾಮೋಹಿ ಗ್ರಾಹಕರ ಅನುಕೂಲಕ್ಕೆ ‘ರೋಬೊ ಅಡ್ವೈಸರ್‌’ ಎನ್ನುವ ವಿಶಿಷ್ಟ ಸೇವೆಗೆ ಚಾಲನೆ ನೀಡಲಾಗಿದೆ. ಇದು ಹೂಡಿಕೆದಾರರ ವೈಯಕ್ತಿಕ ವಿವರ ಆಧರಿಸಿ ಸ್ವಯಂಚಾಲಿತವಾಗಿ ಹಣ ಹೂಡಿಕೆಯ ಸಲಹೆ ನೀಡುತ್ತದೆ. ಇದರ ಜತೆಗೆ ‘ಇನ್‌ಸ್ಟಾಎಂಎಫ್‌ ಮತ್ತು ಎನ್‌ಇಒ’ ಸೌಲಭ್ಯಗಳನ್ನು ಒದಗಿಸಲಾಗಿದೆ. ‘ಇನ್‌ಸ್ಟಾಎಂಎಫ್‌’– ಆನ್‌ಲೈನ್‌ ಹೂಡಿಕೆಯ ಸರಳ ಮತ್ತು ಅನುಕೂಲಕರವಾದ  ಕ್ರಮಗಳಾಗಿವೆ.

ಆನ್‌ಲೈನ್‌ ಟ್ರೇಡಿಂಗ್‌ ಅಕಾಡೆಮಿ: ಹೂಡಿಕೆದಾರರಲ್ಲಿ ಅರಿವು ಮೂಡಿಸಲು ಷೇರ್‌ಖಾನ್‌ ಆದ್ಯತೆ ನೀಡಲಿದೆ. ಇದೇ ಉದ್ದೇಶಕ್ಕೆ ಸಂಸ್ಥೆಯು ಬೆಂಗಳೂರಿನಲ್ಲಿ ‘ಆನ್‌ಲೈನ್‌ ಟ್ರೇಡಿಂಗ್‌ ಅಕಾಡೆಮಿ’ (ಒಟಿಎ) ಆರಂಭಿಸಿದೆ.

ವೈಯಕ್ತಿಕ ಹೂಡಿಕೆದಾರರು, ವಹಿವಾಟುದಾರರು, ಹೊಸಬರು, ಅನುಭವಿಗಳಿಗೆ ವೃತ್ತಿಪರತೆಯ ವಹಿವಾಟು ತಂತ್ರಗಳನ್ನು ಪರಿಚಯಿಸುವುದು ಈ ಅಕಾಡೆಮಿಯ ಉದ್ದೇಶವಾಗಿದೆ. ಇಲ್ಲಿ, ಆನ್‌ಲೈನ್‌ ಟ್ರೇಡಿಂಗ್‌ನ ಮೂಲ ಪಾಠಗಳು, ತಾಂತ್ರಿಕ ವಿಶ್ಲೇಷಣೆಗಳು, ನಷ್ಟ ಸಾಧ್ಯತೆಯ ನಿಯಂತ್ರಣ ಮತ್ತಿತರ ಸಂಗತಿಗಳನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡಲಾಗುವುದು.

‘ಇಲ್ಲಿಯ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ‘ಒಟಿಎ’ ನಿರಂತರವಾಗಿ ಸಲಹೆ ನೀಡಲಿದೆ. ಇಲ್ಲಿಯ ಕೋರ್ಸ್‌ಗಳು ಇತರ ಸಂಸ್ಥೆಗಳಿಗಿಂತ ಭಿನ್ನವಾಗಿವೆ’ ಎಂದು ಅವರು ಹೇಳಿದ್ದಾರೆ.

‘ಬೆಂಗಳೂರಿನಲ್ಲಿ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ ವಹಿವಾಟಿನ ಮೂಲಕ ರಿಟೇಲ್‌ ಹೂಡಿಕೆದಾರರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹೂಡಿಕೆದಾರರು ಈಗ ಸಾಂಪ್ರದಾಯಿಕ ಹೂಡಿಕೆಗಳಾದ ಚಿನ್ನ ಮತ್ತು ರಿಯಲ್‌ ಎಸ್ಟೇಟ್‌ ವಹಿವಾಟಿಗಿಂತ ಷೇರು ವಹಿವಾಟಿನಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಒಲವು ತೋರುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯತ್ತಲೂ ಆಕರ್ಷಿತರಾಗುತ್ತಿದ್ದಾರೆ. ಷೇರು ವಹಿವಾಟಿನಲ್ಲಿ ಆಸಕ್ತಿ ತಳೆಯುವ ಹೊಸಬರು ಮ್ಯೂಚುವಲ್‌ ಫಂಡ್ಸ್‌ಗಳ ಮೂಲಕ ಹೂಡಿಕೆಗೆ ಆದ್ಯತೆ ನೀಡುತ್ತಿದ್ದಾರೆ. ಈ ಪ್ರವೃತ್ತಿಯು ಶೇ 15 ರಿಂದ ಶೇ 20ರಷ್ಟು ಏರಿಕೆ ಕಾಣಲಿದೆ. ಉಳಿದವರು ನೇರವಾಗಿ ಷೇರುಗಳಲ್ಲಿ ಹಣ ತೊಡಗಿಸುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

‘ವಿವಿಧ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸುವುದರ ಅಪಾಯ ಸಾಧ್ಯತೆಯನ್ನು ಹೂಡಿಕೆದಾರರು ಅರ್ಥೈಸಿಕೊಂಡಿರಬೇಕು. ಅಲ್ಪಾವಧಿಯಲ್ಲಿನ ಏರಿಳಿತಗಳು ಹೂಡಿಕೆ ಹಂಚಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆಯೂ ಎಚ್ಚರವಹಿಸಬೇಕು’ ಎಂದೂ ಅವರು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !