ಪಾಕ್‌ಗೆ ಹಿಂತಿರುಗುವ ಸಾಧ್ಯತೆ ತಳ್ಳಿಹಾಕಿದ ಷರೀಫ್‌

7
ಪತ್ನಿ ಆರೋಗ್ಯ ಸ್ಥಿತಿ ಗಂಭೀರ, ಬ್ರಿಟನ್‌ನಲ್ಲಿ ಚಿಕಿತ್ಸೆ

ಪಾಕ್‌ಗೆ ಹಿಂತಿರುಗುವ ಸಾಧ್ಯತೆ ತಳ್ಳಿಹಾಕಿದ ಷರೀಫ್‌

Published:
Updated:
ನವಾಜ್‌ ಷರೀಫ್‌

ಲಂಡನ್‌ : ಪತ್ನಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ, ಸ್ವದೇಶಕ್ಕೆ  ಹಿಂತಿರುಗುವ ಸಾಧ್ಯತೆಯಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ತಿಳಿಸಿದ್ದಾರೆ.

ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಷರೀಫ್‌ ಪತ್ನಿ ಕುಲ್ಸೂಮ್‌ (68) ಅವರು ಕಳೆದ ವರ್ಷ ಆಗಸ್ಟ್‌ನಿಂದ ಲಂಡನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

ಇದೇ ಜೂನ್‌ 14ರಂದು ಕುಲ್ಸೂಮ್‌ ಅವರು ಹೃದಯಾಘಾತಕ್ಕೆ ತುತ್ತಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಯ ತೀವ್ರ ನಿಗಾಘಟಕಕ್ಕೆ ದಾಖಲಿಸಿ, ಜೀವರಕ್ಷಕ ವ್ಯವಸ್ಥೆ ಅಳವಡಿಸಲಾಗಿದೆ.

‘ಕುಲ್ಸೂಮ್‌ಗೆ ಜೀವರಕ್ಷಕ ವ್ಯವಸ್ಥೆ ಕಲ್ಪಿಸಿರುವ ಇಂತಹ ಸಂದರ್ಭದಲ್ಲಿ ನಾನು ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಯೋಚಿಸುವುದು ಸರಿಯೇ ? ಇಂತಹ ಪರಿಸ್ಥಿತಿಯಲ್ಲಿ ಹೆಂಡತಿಯನ್ನು ಇಲ್ಲಿ ಬಿಟ್ಟು ಹೋಗಲು ಸಾಧ್ಯವೇ ?’ ಎಂದು ಆಸ್ಪತ್ರೆಯ ಹೊರಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಯಿಯ ಅನಾರೋಗ್ಯದ ಕಾರಣ ಲಂಡನ್‌ಗೆ ತೆರಳಲು ಷರೀಫ್‌ ಪುತ್ರಿ ಮರಿಯಂಗೆ ಜೂನ್‌ 14ರಂದು ನ್ಯಾಯಾಲಯವು ವಿನಾಯಿತಿ ನೀಡಿತ್ತು. 

ಪನಾಮ ಪೇಪರ್ಸ್‌ ಹಗರಣ ತನಿಖೆ ಸಂಬಂಧ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ ನಿಗ್ರಹ ಪಡೆ  ಪ್ರಕರಣ ದಾಖಲಿಸಿದೆ. ಷರೀಫ್‌ ಅವರಲ್ಲದೆ ಇಬ್ಬರು ಪುತ್ರರಾದ ಹುಸೇನ್‌ ಮತ್ತು ಹಸನ್‌, ಮಗಳು ಮರಿಯಂ ಹಾಗೂ ಅಳಿಯ ಸಫ್ದಾರ್‌ ವಿರುದ್ಧ ಈಗಾಗಲೇ ಮೂರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !