ಗುರುವಾರ , ಏಪ್ರಿಲ್ 15, 2021
19 °C

ಯುವರೈತ ಶಶಿಕುಮಾರ್‌ಗೆ ‘ಬಿಗ್‌ಬಾಸ್‌’ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುವರೈತ ಶಶಿಕುಮಾರ್ ಅವರು ಕಲರ್ಸ್‌ ಸೂಪರ್ ಕನ್ನಡ ವಾಹಿನಿಯ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನ ಆರನೇ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಕಾರ್ಯಕ್ರಮದ ನಿರೂಪಕ ನಟ ಸುದೀಪ್‌ ಅವರು, ‘ಬಿಗ್‌ಬಾಸ್‌’ ಪಟ್ಟಕ್ಕೆ ಶಶಿಕುಮಾರ್‌ ಆಯ್ಕೆಯಾಗಿರುವುದಾಗಿ ಅವರ ಕೈ ಎತ್ತಿ ಘೋಷಿಸಿದರು. ಪ್ರತಿಸ್ಪರ್ಧಿ ನವೀನ್ ಸಜ್ಜು ರನ್ನರ್‌ ಅಪ್‌ ಆದರು.

ಶಶಿಕುಮಾರ್‌ಗೆ ₹50 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಯಿತು. 20 ಸ್ಪರ್ಧಿಗಳು ಈ ಬಾರಿಯ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದರು.

ಪ್ರೇಕ್ಷಕರ ಮತದಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ. 

ಪ್ರಶಸ್ತಿ ಸ್ವೀಕರಿಸಿ ಖುಷಿ ಹಂಚಿಕೊಂಡ ಶಶಿಕುಮಾರ್, ‘ಹಣವನ್ನು ಒಳ್ಳೆಯದಕ್ಕೆ ಖರ್ಚು ಮಾಡುತ್ತೇನೆ. ನೇರವಾಗಿ ಹಣ ಕೊಟ್ಟರೆ ಉಳಿಯುವುದಿಲ್ಲ. ಯುವಕರಿಗೆ ಹಾಗೂ ಕೃಷಿಗೆ ಸಂಬಂಧಪಟ್ಟ ಕೆಲಸಗಳಿಗೆ ಗೆದ್ದ ಹಣವನ್ನು ವಿನಿಯೋಗಿಸುತ್ತೇನೆ’ ಎಂದು ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು