ನಾಗನಿಗೆ ಕೋಳಿ ರಕ್ತದ ತರ್ಪಣ

7
ಜಿಲ್ಲೆಯಾದ್ಯಂತ ಸಂಭ್ರಮದ ಚಂಪಾ ಷಷ್ಠಿ (ತನಿ ಹಬ್ಬ) ಆಚರಣೆ

ನಾಗನಿಗೆ ಕೋಳಿ ರಕ್ತದ ತರ್ಪಣ

Published:
Updated:
Deccan Herald

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಚಂಪಾ ಷಷ್ಠಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ವಿಶಿಷ್ಟ ಸಂಪ್ರದಾಯದಂತೆ ವಿವಿಧೆಡೆ ಕೋಳಿಗಳನ್ನು ಬಲಿಕೊಟ್ಟು, ಅದರ ರಕ್ತವನ್ನು ಹುತ್ತಗಳಿಗೆ ತರ್ಪಣ ನೀಡಿದರು.

ಸ್ಥಳೀಯವಾಗಿ ‘ತನಿ ಹಬ್ಬ’ ಎಂದು ಕರೆಯಲಾಗುವ ಈ ಹಬ್ಬದಲ್ಲಿ ಕೋಳಿಯನ್ನು ಬಲಿ ಕೊಡುವ ವಿಶಿಷ್ಟ ಸಂಪ್ರದಾಯ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪದ್ಧತಿ ಹೆಚ್ಚಾಗಿ ಕಂಡು ಬರುತ್ತದೆ. 

ಷಷ್ಠಿ ಹಬ್ಬದ ದಿನ ಕೋಳಿ ಬಲಿ ನೀಡಿದರೆ, ನಾಗರಹಾವುಗಳು ಗೋಚರಿಸುವುದಿಲ್ಲ, ನಾಗದೋಷವೂ ಕಂಡು ಬರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ, ಹಲವು ತಲೆಮಾರುಗಳಿಂದ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಕೋಳಿಯನ್ನು ಬಲಿ ನೀಡದವರು, ಬಾಳೆಹಣ್ಣು, ಸಕ್ಕರೆ ಮತ್ತು ಹಾಲನ್ನು ಹುತ್ತಗಳಿಗೆ ನೈವೇದ್ಯ ಮಾಡುತ್ತಾರೆ.

ಹಬ್ಬದ ಸಡಗರ: ಹಬ್ಬದ ಅಂಗವಾಗಿ ಮಹಿಳೆಯರು ಹುತ್ತಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಹುತ್ತಗಳು ಇರುವ ಕಡೆಗೆ ತೆರಳಿ, ಅಗರಬತ್ತಿ ಹಚ್ಚಿ, ಹುತ್ತಕ್ಕೆ ಹತ್ತಿಯ ಹಾರ ಹಾಕಿ, ಅರಿಸಿನ, ಕುಂಕುಮ ಇಟ್ಟು, ಹಾಲು ಎರೆದು ಪೂಜೆ ಸಲ್ಲಿಸಿದರು.

ಮಕ್ಕಳು ಕೂಡ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮದಲ್ಲಿ ಭಾಗಿಯಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !