ವಲಸೆ ಕಾರ್ಮಿಕರ ಶೆಡ್‌ ತೆರವು

7
ಬೀದಿಪಾಲಾದ ಸಾವಿರಾರು ಮಂದಿ

ವಲಸೆ ಕಾರ್ಮಿಕರ ಶೆಡ್‌ ತೆರವು

Published:
Updated:

ಬೆಂಗಳೂರು: ಪೂರ್ವ ಬೆಂಗಳೂರು ಪ್ರದೇಶದಲ್ಲಿ ವಲಸೆ ಬಂದು ನೆಲೆಯಾಗಿದ್ದ 700ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳ ಶೆಡ್‌ಗಳ ತೆರವು ಕಾರ್ಯ ಆರಂಭವಾಗಿದೆ. 

ದೇವರಬೀಸನಹಳ್ಳಿ, ವರ್ತೂರು, ಕರಿಯಮ್ಮನ ಅಗ್ರಹಾರ, ಮುನ್ನೇ ಕೊಳಲು ಮತ್ತು ಬೆಳ್ಳಂದೂರು ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆ ದಿದೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿ 7 ಸಾವಿರ ಮಂದಿ ನೆಲೆಯಿಲ್ಲದೆ ಒದ್ದಾಡುವಂತಾಗಿದೆ.

ನ. 30ರಂದು ಎರಡು ಅರ್ಥ್‌ಮೂವರ್‌ ಯಂತ್ರಗಳು ಮುನ್ನೇ ಕೊಳಲು ಕಾರ್ಮಿಕ ಕ್ಯಾಂಪ್‌ ಬಳಿ ಷೆಡ್‌ಗಳನ್ನು ತೆರವುಗೊಳಿಸಲು ಆರಂಭಿಸಿದವು. ತೆರವು ಕಾರ್ಯ ಗಮನಕ್ಕೆ ಬರುತ್ತಿದ್ದಂತೆಯೇ ತಡೆಯೊಡ್ಡಿ ಅಂಗಲಾಚಿದ ಕಾರ್ಮಿಕರಿಗೆ ಅಲ್ಲಿಂದ ತೆರಳಲು ಸೋಮವಾರದವರೆಗೆ ಗಡುವು ನೀಡಲಾಗಿದೆ. 

ದಿಢೀರ್‌ ತೆರವು: ಇಲ್ಲಿನ ಕೆರೆಗಳ ಪಕ್ಕದ ಖಾಸಗಿಯವರಿಗೆ ಸೇರಿದ ಖಾಲಿ ಜಾಗಗಳಲ್ಲಿ ಸುಮಾರು 10 ವರ್ಷಗಳ ಹಿಂದೆ ಇಲ್ಲಿ ಗುಡಿಸಲುಗಳನ್ನು ಹಾಕಲಾಗಿತ್ತು. ಭೂವ್ಯವಹಾರ ಉತ್ತುಂಗಕ್ಕೇರುತ್ತಿದ್ದಂತೆಯೇ ಇಲ್ಲಿನ ಗುಡಿಸಲುಗಳ ದಿಢೀರ್‌ ತೆರವು ಕಾರ್ಯ ಆರಂಭಿಸಲಾಯಿತು. ಇಲ್ಲಿ ನೆಲೆಸಿರುವವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಆರೋಪಿಸಲಾರಂಭಿಸಿದರು.

‘ತೆರವು ಸಂಬಂಧಿಸಿ ಬಿಬಿಎಂಪಿಯವರು ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ಕೊಟ್ಟಿರಲಿಲ್ಲ. ಒಂದು ವೇಳೆ ಹೇಳಿದ್ದರೂ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಒದಗಿಸಲು ಅಸಾಧ್ಯವಾಗಿತ್ತು’ ಎಂದು ಇಲಾಖೆ ಮೂಲಗಳು ಹೇಳಿವೆ.

ಇಲ್ಲಿ ನೆಲೆಯಾಗಿದ್ದವರ ಪೈಕಿ ಬಹುಪಾಲು ಪಶ್ಚಿಮ ಬಂಗಾಳ ಮತ್ತು ಒಡಿಶಾಗೆ ಸೇರಿದವರು. ಬಹಳಷ್ಟು ಜನ ಅನಧಿಕೃತವಾಗಿಯೇ ವಲಸೆ ಬಂದವರು.

‘ಕಳೆದ ಚುನಾವಣೆ ಸಂದರ್ಭ ಇಲ್ಲಿನವರನ್ನು ಓಟ್‌ ಬ್ಯಾಂಕ್‌ ಆಗಿ ಕಾಣಲಾಗಿತ್ತು. ಎಲ್ಲರಿಗೂ ಆಧಾರ್‌ ಕಾರ್ಡ್‌ ಮತ್ತು ಮತದಾರರ ಗುರುತಿನ ಚೀಟಿ ನೀಡಲಾಗಿತ್ತು. ಆದರೆ, ಚುನಾವಣೆ ಸಂದರ್ಭ ಇಲ್ಲಿನ ಬಹುಪಾಲು ಮಂದಿ ಕಾಂಗ್ರೆಸ್‌ಗೆ ಮತದಾನ ಮಾಡಿದ್ದಾರೆ. ಕೆಲವರಷ್ಟೇ ಬಿಜೆಪಿಗೆ ಮತಹಾಕಿದ್ದಾರೆ ಎಂಬ ಅಂಶವನ್ನು ಇಲ್ಲಿನ ಸ್ಥಳೀಯ ರಾಜಕಾರಣಿಗಳು ಕಂಡುಕೊಂಡಿದ್ದರು. ಇದರಿಂದ ಅತೃಪ್ತ ರಾಜಕಾರಣಿಗಳು ಇಲ್ಲಿನ ಭೂ ಮಾಲೀಕರೊಂದಿಗೆ ಸೇರಿ ಇವರನ್ನು ತೆರವುಗೊಳಿಸಲು ಮುಂದಾಗಿದ್ದಾರೆ’ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದರು.

‘ಕೊರೆಯುವ ಚಳಿಯಲ್ಲಿ ಈ ಬಡಜನರು ತಮ್ಮ ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು?’ ಎಂದು ಮಾನವಹಕ್ಕು ಕಾರ್ಯಕರ್ತ ಕಲೀಂ ಉಲ್ಲಾ ಪ್ರಶ್ನಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !