ಒಂದು ನೋಡು ಪುಸ್ತಕ!

7

ಒಂದು ನೋಡು ಪುಸ್ತಕ!

Published:
Updated:
ಒಂದು ನೋಡು ಪುಸ್ತಕ!

ಗಜೇಂದ್ರಗಡ ಹಾಗೂ ರೋಣ ತಾಲ್ಲೂಕುಗಳ ದೇವಸ್ಥಾನಗಳಲ್ಲಿನ ಶಿಲ್ಪಕಲೆಯ ಸೌದರ್ಯವನ್ನು ತೋರಿಸುವ ಪುಸ್ತಕ ಪುಂಡಲೀಕ ಕಲ್ಲಿಗನೂರ ಅವರ ‘ಶಿಲ್ಪಕಲಾ ದೇಗುಲಗಳು’.

ಇದು ಓದುವ ಪುಸ್ತಕ ಎಂಬುದಕ್ಕಿಂತಲೂ ಹೆಚ್ಚಾಗಿ ಆದಿಯಿಂದ ಅಂತ್ಯದವರೆಗೆ ಒಮ್ಮೆ ನೋಡಬೇಕಾದ ಪುಸ್ತಕ ಎಂದು ಖಂಡಿತವಾಗಿ ಹೇಳಬಹುದು. ಈ ಎರಡು ತಾಲ್ಲೂಕುಗಳನ್ನು ಸುತ್ತಾಡಿ, ಪುಂಡಲೀಕ ಅವರು ಶಿಲ್ಪಕಲೆಯ ಚಿತ್ರಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು, ಈ ಪುಸ್ತಕ ಸಿದ್ಧಪಡಿಸಿದ್ದಾರೆ. ಛಾಯಾಚಿತ್ರಗಳನ್ನು ಸೆರೆಹಿಡಿಯುವಲ್ಲಿ ಅವರಿಗೆ ನೆರವಾದವರು ಕೆ. ಮಹಾಲಿಂಗ ಮತ್ತು ಮಂಜುನಾಥ್ ಎಸ್. ರಾಠೋಡ್.

ಸುಂದರವಾದ ಛಾಯಾಚಿತ್ರಗಳು, ಉತ್ತಮ ಗುಣಮಟ್ಟದ ಕಾಗದ, ಗುಣಮಟ್ಟದ ಮುದ್ರಣದ ಕಾರಣದಿಂದಾಗಿ ಈ ಪುಸ್ತಕ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿರುವವರ ಮನಸ್ಸನ್ನು ಸೆಳೆಯುವಂತೆ ಇದೆ. ಪುಸ್ತಕದಲ್ಲಿ ಪ್ರಕಟಿಸಿರುವ ಚಿತ್ರಗಳ ಬಗ್ಗೆ ಚಿಕ್ಕ ಚಿಕ್ಕ ಟಿಪ್ಪಣಿಗಳನ್ನು ಒದಗಿಸಿದ್ದು, ಆಯಾ ದೇವಸ್ಥಾನಗಳ ಮಹತ್ವ ಏನು ಎಂಬುದನ್ನು ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !