ಜಿಲ್ಲೆಯಲ್ಲೇ ಅತಿ ಎತ್ತರದ ಶಿವನ ಮೂರ್ತಿ ಅನಾವರಣ

ಗುರುವಾರ , ಜೂನ್ 20, 2019
31 °C
ಯಳಂದೂರು ತಾಲ್ಲೂಕಿನ ಮದ್ದೂರು ಗುಡ್ಡದ ಬಳಿ ನಿರ್ಮಾಣ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟನೆ

ಜಿಲ್ಲೆಯಲ್ಲೇ ಅತಿ ಎತ್ತರದ ಶಿವನ ಮೂರ್ತಿ ಅನಾವರಣ

Published:
Updated:
Prajavani

ಯಳಂದೂರು: ಮಾನವ ವೇಗದ ಜೀವನಕ್ಕೆ ಒತ್ತು ನೀಡಿ ಸಂಯಮ ಮತ್ತು ಸಹಕಾರವನ್ನು ಕಳೆದುಕೊಳ್ಳುತ್ತಿದ್ದಾನೆ. ಸಂವೇದನಾಶೀಲ ಮನಸ್ಸುಗಳನ್ನು ಜಾಗೃತಾವಸ್ಥೆಗೆ ತರಲು ದೇವಸ್ಥಾನಗಳು ನೆರವಾಗುತ್ತವೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆಮೆಕೆರೆ ರಸ್ತೆಯ ಮದ್ದೂರು ಗುಡ್ಡದ ಬಳಿ ನಿರ್ಮಿಸಿರುವ, ಜಿಲ್ಲೆಯ ಪ್ರಥಮ 35 ಅಡಿ ಎತ್ತರದ ಶಿವ ಶಿಲ್ಪ ಹಾಗೂ ನಂದಿ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ನೂರಾರು ಆವಿಷ್ಕಾರಗಳಾಗಿವೆ. ವಿಜ್ಞಾನದ ಸಂಶೋಧನೆಗಳ ಫಲವನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಈ ನಡುವೆ ಭಾರತದಂತಹ ರಾಷ್ಟ್ರದಲ್ಲಿ ಈಗಲೂ ದೈವತ್ವಕ್ಕೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ ಎಂದರು.

ಶಾಸಕ ಎನ್. ಮಹೇಶ್ ಮಾತನಾಡಿ, ‘ಶಿಲ್ಪಿಗಳು ಸುಂದರವಾಗಿ ಶಿವನ ಮೂರ್ತಿಯನ್ನು ರೂಪಿಸಿದ್ದಾರೆ. ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಶಿವಜಪ ಅನುರಣಿಸಲಿದೆ. ಆಧ್ಯಾತ್ಮಿಕ ಅನುಭೂತಿ ಕಟ್ಟಿಕೊಡುವ ತಾಣ ಇದಾಗಲಿದೆ. ಶಿವರಾತ್ರಿ ಮತ್ತು ಗೌರಿ ಹಬ್ಬಗಳಲ್ಲಿ ಶಿವಭಕ್ತರ ಸಂಗಮ ಕ್ಷೇತ್ರವಾಗಿ ರೂಪಿತವಾಗಲಿದೆ’ ಎಂದು
ಬಣ್ಣಿಸಿದರು.

ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಶ ಸ್ಥಾಪನೆ, ನವಗ್ರಹ ಮೃತ್ಯುಂಜಯ ರುದ್ರ ಹೋಮಗಳನ್ನು ಉಪಾಸಕ ನವೀನ್‌ ಶಾಸ್ತ್ರಿ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.

ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯಿತು. ಸುತ್ತಮುತ್ತಲ ಸಾವಿರಾರು ಜನರು ಪಾಲ್ಗೊಂಡು ಭಕ್ತಿ ಮೆರೆದರು. ಮಧ್ಯಾಹ್ನ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾರಾಪುರ ಬಸವರಾಜ ಸ್ವಾಮೀಜಿ, ಮರಿಯಾಲ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಗೌಡಹಳ್ಳಿ ಮರಿತೋಂಟದಾರ್ಯ ಸ್ವಾಮೀಜಿ, ಮೈಸೂರು ನೀಲಕಂಠೇಶ್ವರ ಮಠದ ಸಿದ್ದಮಲ್ಲ ಸ್ವಾಮೀಜಿ, ಕೆಸ್ತೂರು ತೋಂಟದಾರ್ಯ ಸ್ವಾಮೀಜಿ, ಗುಂಡೇಗಾಲ ವೃಷಭರಾಜೇಂದ್ರ ಸ್ವಾಮೀಜಿ, ಹೊನ್ನೂರು ಶಿವಕುಮಾರಸ್ವಾಮಿ, ದೇವರಹಳ್ಳಿ ಮಹದೇವಸ್ವಾಮಿ ಹಾಗೂ ಮಾಜಿ ಶಾಸಕ ಎಸ್‌. ಬಾಲರಾಜ್‌ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !