‘ಲಿಂಗಾಯತ ಧರ್ಮ ಎನ್ನದೆ, ತತ್ವ ಎಂದೇ ಭಾವಿಸಿದ್ದರು’

7
ಶ್ರೀಗಳೊಂದಿಗಿನ ಒಡನಾಟ ಸ್ಮರಿಸಿದ ಬಸವ ಸಮಿತಿ ಅಧ್ಯಕ್ಷ ಅರವಿಂದ ಬಿ.ಜತ್ತಿ

‘ಲಿಂಗಾಯತ ಧರ್ಮ ಎನ್ನದೆ, ತತ್ವ ಎಂದೇ ಭಾವಿಸಿದ್ದರು’

Published:
Updated:
Prajavani

ಬೆಂಗಳೂರು: ‘ಮಾಡಿದಂತಿರಬೇಕು ಮಾಡದಂತಿರಬೇಕು ಮಾಡಿದ ಮಾಟದಲ್ಲಿ ತಾನಿಲ್ಲದಂತಿರಬೇಕು’ ಎಂಬ ಬಸವಣ್ಣನ ವಚನವನ್ನೇ ಸದಾ ಬೋಧಿಸುತ್ತಿದ್ದ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ‘ಲಿಂಗಾಯತ’ ವನ್ನು ಧರ್ಮ ಎಂದು ಪರಿಗಣಿಸದೆ, ತತ್ವ ಎಂದೇ ಭಾವಿಸಿದ್ದರು. ಅಲ್ಲದೇ, ಬಸವ ತತ್ವದಂತೆಯೆ ಬದುಕಿದ್ದವರು...’

ಬಸವ ಸಮಿತಿಯ ಅಧ್ಯಕ್ಷ ಅರವಿಂದ ಬಿ.ಜತ್ತಿ, ಶ್ರೀಗಳೊಂದಿಗಿನ ಒಡನಾಟದ ನೆನಪುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡದ್ದು ಹೀಗೆ. 

‘ವೀರಶೈವ– ಲಿಂಗಾಯತ ಧರ್ಮದ ಕುರಿತು ಸಮಾಜದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ‘ಎಲ್ಲ ಮಠಗಳ ಮಠಾಧೀಶರನ್ನು ಕರೆಯಿಸಿ, ಸಭೆ ಆಯೋಜಿಸಿ. ಚರ್ಚೆ ಮಾಡಲು ನಾನೂ ಬರುವೆ’ ಎಂದು ಶ್ರೀಗಳು ಹೇಳಿದ್ದರು. ಆದರೆ, ಬಸವ ಸಮಿತಿಯಿಂದ ಕೊನೆಗೂ ಸಭೆ ಆಯೋಜನೆ ಮಾಡಲಾಗಲಿಲ್ಲ’ ಎಂದರು ಜತ್ತಿ. 

‘ನಮ್ಮ ತಂದೆ ಬಿ.ಡಿ.ಜತ್ತಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕಾರ್ಯಕ್ರಮವೊಂದರಲ್ಲಿ ಶ್ರೀಗಳನ್ನು ನಾನು ಮೊದಲ ಬಾರಿ ನೋಡಿದ್ದೆ. ಆಗ ನನಗಿನ್ನು 10 ವರ್ಷ. ಅವರನ್ನು ನೋಡಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಬಸವ ಸಮಿತಿಯೊಂದಿಗೆ ಶ್ರೀಗಳು, ಅಪ್ಪನ ಕಾಲದಿಂದಲೂ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಆಗಾಗ ನಮ್ಮ ಮನೆಗೂ ಬರುತ್ತಿದ್ದರು. ಸಾಮಾಜಿಕ ಸಮಸ್ಯೆಗಳ, ಗೊಂದಲಗಳ ಬಗ್ಗೆ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದೇವು’ ಎಂದು ನೆನಪಿನ ಗಂಟನ್ನು ಬಿಟ್ಟಿಟ್ಟರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !