ವಾರಾಂತ್ಯದವರೆಗೆ ಐಸಿಯುನಲ್ಲಿ ಸಿದ್ದಗಂಗಾ ಶ್ರೀ

7

ವಾರಾಂತ್ಯದವರೆಗೆ ಐಸಿಯುನಲ್ಲಿ ಸಿದ್ದಗಂಗಾ ಶ್ರೀ

Published:
Updated:
Deccan Herald

ತುಮಕೂರು: ಚೆನ್ನೈನ ಡಾ.ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಈ ವಾರಾಂತ್ಯದವರೆಗೂ ಐಸಿಯುನಲ್ಲಿ ಚಿಕಿತ್ಸೆ ನೀಡುವ ಸಾಧ್ಯತೆ ಇದೆ.

‘ಶುಕ್ರವಾರ ಇಲ್ಲವೇ ಶನಿವಾರದ ವರೆಗೆ ಐಸಿಯುನಲ್ಲಿ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಬಹುದು. ಐಸಿಯುನಲ್ಲಿ ಚಿಕಿತ್ಸೆ ಪೂರ್ಣವಾದ ನಂತರ ನೇರವಾಗಿ ಮಠಕ್ಕೆ ತೆರಳುವ ಸಾಧ್ಯತೆ ಇದೆ’ ಎಂದು ಸ್ವಾಮೀಜಿ ಚಿಕಿತ್ಸೆ ಉಸ್ತುವಾರಿ ವಹಿಸಿರುವ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ತಿಳಿಸಿದರು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ.ಅಳಗಿರಿ ಸೋಮವಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಮತ್ತೊಂದೆಡೆ ಸ್ವಾಮೀಜಿ ಆರೋಗ್ಯವಾಗಿ ಮರಳಲಿ ಎಂದು ಮಠದ ವಸತಿ ನಿಲಯದ ಮಕ್ಕಳು ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !