ಅಂಗಡಿಗಳ ಮೇಲೆ ದಾಳಿ: 2 ಕ್ವಿಂಟಲ್‌ ಪ್ಲಾಸ್ಟಿಕ್‌ ವಶ

7

ಅಂಗಡಿಗಳ ಮೇಲೆ ದಾಳಿ: 2 ಕ್ವಿಂಟಲ್‌ ಪ್ಲಾಸ್ಟಿಕ್‌ ವಶ

Published:
Updated:
Deccan Herald

ಚಾಮರಾಜನಗರ: ಪಟ್ಟಣದ ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ಸೋಮವಾರ ದೊಡ್ಡಅಂಗಡಿ ಮತ್ತು ಚಿಕ್ಕ ಅಂಗಡಿ ಬೀದಿಗಳ ಆರು ಅಂಗಡಿಗಳ ಮೇಲೆ ದಿಢೀರ್‌ ದಾಳಿ ಮಾಡಿ 200 ಕೆಜಿಗಳಷ್ಟು ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದಾರೆ. 

‘ನಗರಸಭೆಯ ‌ಪರಿಸರವಿಭಾಗದ ಎಂಜಿನಿಯರ್‌ ಗಿರಿಜಮ್ಮ ನೇತೃತ್ವದಲ್ಲಿ ಆರು ಅಂಗಡಿಗಳಿಗೆ ದಾಳಿ ಮಾಡಲಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಮಹದೇವ್ ಪೇಪರ್‌ ಮಾರ್ಟ್‌ ಅಂಗಡಿ ಮಾಲೀಕರಿಗೆ ₹2,000 ಮತ್ತು ಹನುಮಾನ್‌ ಪೇಪರ್‌ ಮಾರ್ಟ್‌ ಮಾಲೀಕರಿಗೆ ₹1,000 ದಂಡ ವಿಧಿಸಲಾಗಿದೆ. ಉಳಿದ ನಾಲ್ಕು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ನಗರಸಭೆಯ ಆರೋಗ್ಯ ವಿಭಾಗದ ಹಿರಿಯ ನಿರೀಕ್ಷಕ ಎಸ್‌.ಶರವಣ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !