‘ರೈತರಿಗೆ ತಂತ್ರಜ್ಞಾನದ ಅರಿವು ನೀಡಿ’

7

‘ರೈತರಿಗೆ ತಂತ್ರಜ್ಞಾನದ ಅರಿವು ನೀಡಿ’

Published:
Updated:
Prajavani

ಬೆಂಗಳೂರು: ‘ಯುವಕರು, ಕೃಷಿ ತಂತ್ರಜ್ಞಾನದ ಬೆಳವಣಿಗೆ ಬಗ್ಗೆ ರೈತರಿಗೆ ತಿಳಿಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮಂಜು ಶರ್ಮಾ ಅಭಿಪ್ರಾಯಪಟ್ಟರು.

ರೇವಾ ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಶ್ವವಿದ್ಯಾಲಯ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. 

ಹಂಸಲೇಖ ಮಾತನಾಡಿ, ‘ರೇವಾ ವಿಶ್ವವಿದ್ಯಾಲಯ ಸಂಸ್ಕೃತಿಗಳ ಬೀಡು. ಇಲ್ಲಿ ಪ್ರದರ್ಶನ ಕಲೆಗಳ ವಿಭಾಗ ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಕಲೆ- ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ಕುಲಪತಿ ಪಿ.ಶ್ಯಾಮರಾಜು ಮಾತನಾಡಿ, ‘ಜನಮಾನಸದ ಮನಗಳಲ್ಲಿ ಸದಾ ನೆಲೆ ನಿಲ್ಲುವಂತಹ ಕಾರ್ಯಗಳನ್ನು ನಾವು ಮಾಡಬೇಕು. ಇತರರ ನೋವುಗಳಿಗೆ ನೆರವಾಗುವ ಮೂಲಕ ಬದುಕನ್ನು ಸುಂದರವಾಗಿಸಿಕೊಂಡು ಬಾಳಬೇಕು’ ಎಂದು ಕಿವಿಮಾತು ಹೇಳಿದರು. 

ಚಲನಚಿತ್ರ ನಿರ್ದೇಶಕ ಕೆ.ವಿಶ್ವನಾಥ್ ಹಾಗೂ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !