ವೈದ್ಯಕೀಯ ಕ್ಷೇತ್ರದಲ್ಲೇ ಶಿವಕುಮಾರ ಶ್ರೀ ವಿಸ್ಮಯ

7

ವೈದ್ಯಕೀಯ ಕ್ಷೇತ್ರದಲ್ಲೇ ಶಿವಕುಮಾರ ಶ್ರೀ ವಿಸ್ಮಯ

Published:
Updated:
Prajavani

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಎಲ್‌ಡಿಇ ಸ್ವಾಯತ್ತ ವಿ.ವಿ.ಯ ಕುಲಪತಿ ಡಾ.ಎಂ.ಎಸ್‌.ಬಿರಾದಾರ, 111 ವರ್ಷಗಳ ಕಾಲ ಬದುಕಿ ವೈದ್ಯಕೀಯ ಕ್ಷೇತ್ರದಲ್ಲಿ ವಿಸ್ಮಯ ಮೂಡಿಸಿದ ಹಾಗೂ ಲೋಕ ಕಲ್ಯಾಣ ಕಾರ್ಯ ಮಾಡಿ, ಜನಮಾನಸದಲ್ಲಿ ಬೆಳಕು ಚೆಲ್ಲಿದವರು ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಪ್ರಪಂಚದಲ್ಲಿ ದೀರ್ಘಾಯುಷಿಗಳಾಗಿ ಬದುಕಿದ 10 ಜನರಲ್ಲಿ ಶ್ರೀಗಳು 6ನೇಯವರಾಗಿದ್ದಾರೆ ಎಂದರು.

ಬಿ.ಎಲ್.ಡಿ.ಇ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಆಡಳಿತಾಧಿಕಾರಿ ಡಾ.ಅಜಾತಸ್ವಾಮಿ, ಡಾ.ಆರ್.ಕೆ.ಕುಲಕರ್ಣಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಡಾ.ವಿ.ಪಿ.ಹುಗ್ಗಿ, ಡಾ.ಆರ್.ವಿ.ಕುಲಕರ್ಣಿ, ಬಿ.ಆರ್.ಪಾಟೀಲ, ಡಾ.ವಿಜಯ ವಾರದ, ಡಾ.ಎಂ.ಎಸ್.ಮದಭಾವಿ, ಡಾ.ವಿ.ಡಿ.ಐಹೊಳ್ಳಿ, ಪ್ರೊ.ಎ.ಬಿ.ಬೂದಿಹಾಳ, ಜಂಬುನಾಥ ಕಂಚ್ಯಾಣಿ, ಡಾ.ಎಂ.ಎಸ್.ಹಿರೇಮಠ, ಜೆ.ಎಸ್.ಗೌಡರ, ಡಾ.ಗುಗ್ಗರಿಗೌಡರ, ಸುರೇಶ ಗೊಣಸಗಿ, ಡಾ.ಬಾಗಾಯತ, ದಶರಥ ತಾವಂಸೆ ಇದ್ದರು.

ರಾಷ್ಟ್ರೀಯ ಬಸವ ಸೇನಾ: ನಗರದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದ ವತಿಯಿಂದ ಮೇಣದ ಬತ್ತಿ ಹಚ್ಚಿ ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ, ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಸಂಸ್ಕಾರ ಕಲ್ಪಿಸಿದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ನಡೆದಾಡುವ ದೇವರು, ಶತಾಯುಷಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯದಿಂದ ನಾಡು ಬಡವಾಯಿತು ಎಂದರು.

ಶಾಂತವೀರ ಥಾಲಭಾವಡಿ, ನಿಂಗಪ್ಪ ಸಂಗಾಪುರ, ರಾಜಶೇಖರ ಉಮರಾಣಿ, ದ್ರಾಕ್ಷಾಯಿಣಿ ಬಿರಾದಾರ, ಆನಂದ ಗೊಳಸಂಗಿ, ನೀಲಕಂಠ ಹಳ್ಳಿ, ಪರಶುರಾಮ ಜ್ಯೋತಿ, ವಿನೋದ ವ್ಯಾಸ, ಶಿವಾನಂದ ಸಾಂಗೊಳಿ, ಸಂತೋಷ ಬಾಲಗಾಂವಿ, ಪ್ರಭು ಶಿರಗೊಂಡ, ಪಿಂಟು ಹಡಪದ, ಯಲ್ಲಪ್ಪ ಕಲ್ಯಾಣಿ, ವಿಜಯಕುಮಾರ ರಂಜಣಗಿ, ಶಿವರಾಜ ಶಿಂಧೆ, ಚಂದ್ರಕಾಂತ ಸಾಳುಂಕೆ ಇದ್ದರು.

ಐನಾಪುರ ಮಹಲ್‌ ಗ್ರಾಮ: ವಿಜಯಪುರ ತಾಲ್ಲೂಕಿನ ಐನಾಪುರ ಮಹಲ್ ಗ್ರಾಮದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಆಧುನಿಕ ಬಸವಣ್ಣ, ನಡೆದಾಡುವ ದೇವರು, ಕಾಯಕ ಯೋಗಿ ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನಲೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರು, ಯುವಕರು ಇದ್ದರು.

ಜೋರಾಪುರ ಪೇಟೆ: ನಗರದ ಜೋರಾಪುರ ಪೇಟೆಯಲ್ಲಿನ ತಿಲಕ್ ಚೌಕ್‌ದಲ್ಲಿ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯದಿಂದ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ನಡೆದಾಡುವ ದೇವರು ಎಂಬ ಪದಕ್ಕೆ ಅನ್ವರ್ಥ ಎನ್ನುವ ಹಾಗೆ ಶ್ರೀಗಳು ತುಂಬು ಜೀವನ ನಡೆಸಿದರು ಎಂದರು.

ಮಹಾನಗರ ಪಾಲಿಕೆ ಉಪ ಮೇಯರ್‌ ಗೋಪಾಲ ಘಟಕಾಂಬಳೆ, ಸದಸ್ಯರಾದ ಅಪ್ಪು ಸಜ್ಜನ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ಸಿದ್ದು ಮಲ್ಲಿಕಾರ್ಜುನಮಠ, ರವಿ ತುಪ್ಪದ, ಮುತ್ತು ಮಾದಗುಡಿ, ಮುರುಗೇಶ ಕಿಣಗಿ, ಮಂಜುನಾಥ ನ್ಯಾಮಗೊಂಡ, ಕಲ್ಲು ರೂಗಿ, ವಿನೋದ ತೆಲಸಂಗ, ಪ್ರಕಾಶ ಸಜ್ಜನ, ಸಂತೋಷ ಪವಾರ, ವಿನಾಯಕ ದಹಿಂಡೆ ಇದ್ದರು.

ಮಾನವ ಹಕ್ಕುಗಳ ಕಲ್ಯಾಣ ಮಂಡಳಿ: ನಗರದ ಹಜರತ್ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಶತಾಯುಷಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಮತ್ತು ವಿವಿಧ ಪ್ರಗತಿ ಪರ ಸಂಘಟನೆಗಳ ಮುಖಂಡರಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮುಖಂಡರಾದ ಹಾಸಿಂಪೀರ ವಾಲಿಕಾರ, ದಿಲಾವರ್‌ ಖಾಜಿ, ಸಾಹೇಬಗೌಡ ಬಿರಾದಾರ, ಮುಜಾಹಿದ್ ನಿಂಬಾಳ, ಕೃಷ್ಣ ಕಾಟೆವಾಲ್‌, ದುಂಡಪ್ಪ ಬಗಲಿ, ಶಾಮನ್‌ ಇನಾಮದಾರ, ಶಿವಪ್ಪ ಹೆಬ್ಬಾಳ, ಶಂಕರಗೌಡ ಬಿರಾದಾರ, ಮಲ್ಲಪ್ಪ ಇಂಡಿ, ಚನ್ನಪ್ಪ ಔರಸಂಗ, ಶರಣಪ್ಪ ಕಂಬಾರ, ಲಕ್ಷ್ಮಣ ತಮಗೊಂಡ, ಶರಣಪ್ಪ ಸಾಲಿ, ಮುತ್ತು ಜಂಗಮಶೆಟ್ಟಿ, ಮಹಾಂತೇಶ ಪಡನಾಡ, ಚಂದ್ರಶೇಖರ ಇಂಡಿ, ಸುನೀಲ ದೇವಗಿರಕರ, ಮುಜೀಬ್‌ ಶೇಖ್, ಟ್ಯಾಕ್ಸಿ ಪಟೇಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !