ಸಿದ್ದರಾಮಯ್ಯ ಔತಣಕೂಟ

7

ಸಿದ್ದರಾಮಯ್ಯ ಔತಣಕೂಟ

Published:
Updated:

ಬೆಂಗಳೂರು: ಪಕ್ಷದ ಶಾಸಕರು ಮತ್ತು ಮುಖಂಡರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಾಜ್‌ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಮಂಗಳ
ವಾರ ಔತಣಕೂಟ ಏರ್ಪಡಿಸಿದ್ದರು.

ಇತ್ತೀಚಿನ ಬೆಳವಣಿಗೆಗಳು ಮತ್ತು ದೋಸ್ತಿ ಸರ್ಕಾರದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಪಕ್ಷದ ನಾಯಕರಲ್ಲಿ ವಿಶ್ವಾಸ ಮರುಸ್ಥಾಪಿಸಲು ಈ ಕೂಟ ಏರ್ಪಡಿಸಿದ್ದರು ಎಂದೇ ವಿಶ್ಲೇಷಿಸಲಾಗಿದೆ.

ಪ್ರಿಯಾಂಕ್ ಖರ್ಗೆ, ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ರಾಜಶೇಖರ ಪಾಟೀಲ, ಬೈರತಿ ಸುರೇಶ್, ಧರ್ಮಸೇನ, ಡಾ. ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಬಿ.ಸಿ. ಪಾಟೀಲ, ಮುನಿಯಪ್ಪ, ನಾರಾಯಣಸ್ವಾಮಿ, ನರೇಂದ್ರ ಸೇರಿ ಹಲವರು ಪಾಲ್ಗೊಂಡಿದ್ದರು.

ಆದರೆ, ಮಾಜಿ ಸಚಿವರು ಮತ್ತು ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕೆಲವು ನಾಯಕರು ದೂರ ಉಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !