ಶುಕ್ರವಾರ, ಡಿಸೆಂಬರ್ 6, 2019
21 °C
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಗಾಂಧಿ ಕೊಂದ ಗಿರಾಕಿಗಳ ವಂಶದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸಂವಿಧಾನ ‌ಕೊಟ್ಟಿದ್ದೇ ಕಾಂಗ್ರೆಸ್. ಗಾಂಧೀಜಿಯನ್ನು ಕೊಂದ ಗಿರಾಕಿಗಳ ವಂಶದವರು ಅವರು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಿಧಾನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಹಿಂದುತ್ವ ಹೇಳುವವರೇ ಅಸಮಾನತೆ ಹುಟ್ಟು ಹಾಕಲು ಕಾರಣರಾಗಿದ್ದಾರೆ. ಬಿಜೆಪಿಯವರು ಧರ್ಮ, ಜಾತಿಯನ್ನು ಜನರ ಮನಸ್ಸಿನಲ್ಲಿ ತುಂಬಿ ಬಿಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ನಮ್ಮ ಸಾಧನೆ, ಸಂವಿಧಾನ ಮತ್ತು ವಿಚಾರಧಾರೆ ಬಗ್ಗೆ ಸ್ಪಷ್ಟತೆ ಇರಬೇಕು‌. ಬಿಜೆಪಿಯವರು ಏನೋ ಹೇಳಿದರು ಎಂದು ಗೊಂದಲಕ್ಕೀಡಾಗಬಾರದು’ ಎಂದರು.

‘ಆರ್‌ಎಸ್‌ಎಸ್‌ ಗಿರಾಕಿಗಳಿಗೆ ಹಳೆ ವ್ಯವಸ್ಥೆಯೇ ಇರಬೇಕು ಎಂಬ ಭಾವನೆ ಇದೆ. ಅಸಮಾನತೆ ಇರುವ ತನಕ ಶೋಷಣೆ ಇರುತ್ತದೆ. ಗೋಹತ್ಯೆ ಕುರಿತು ಮಾತನಾಡುವ ಬಿಜೆಪಿಯವರು ಗೋವಿನ ಸಗಣಿ ಎತ್ತಿಲ್ಲ, ಕಸ ಸುರಿದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಮೇಲ್ವರ್ಗದವರು ಯಾವತ್ತಾದರೂ ಸಗಣಿ ಎತ್ತಿದ್ದಾರಾ’ ಎಂದ ಅವರು, ‘ನೀನು ಸಗಣಿ ಎತ್ತಿದ್ದಿಯೇನಪ್ಪ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಪ್ರಶ್ನಿಸಿದರು. ‘ನಾನು ಕಸ ಸುರಿದಿದ್ದೇನೆ.‌ ಸಗಣಿ ಎತ್ತಿದ್ದೇನೆ. ಎಲ್ಲ‌ ಕೆಲಸ‌ವನ್ನೂ ಮಾಡಿದ್ದೇನೆ. ನೀನು ಮಾಡಿದ್ದಿಯಾ’ ಎಂದೂ ಕೇಳಿದರು. ಇಲ್ಲ ಎಂದು ದಿನೇಶ್ ತಲೆಯಾಡಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು