ಸಿದ್ಧರಾಮೇಶ್ವರರ ಜಾತ್ರಾ ಮಹೋತ್ಸವ 13 ರಿಂದ

7

ಸಿದ್ಧರಾಮೇಶ್ವರರ ಜಾತ್ರಾ ಮಹೋತ್ಸವ 13 ರಿಂದ

Published:
Updated:

ಸೊಲ್ಲಾಪುರ: ನಗರದ ಆರಾಧ್ಯದೈವ ಸಿದ್ಧರಾಮೇಶ್ವರರ ಜಾತ್ರಾ ಮಹೋತ್ಸವ, ಜ.13 ರಿಂದ 17ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧೇಶ್ವರ ಪಂಚ ಕಮಿಟಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದರು.

ಸಣ್ಣ ಹಳ್ಳಿಯಾಗಿದ್ದ ಸೊನ್ನಲಗಿ, ಸಿದ್ಧರಾಮೇಶ್ವರರ ವಾಸ್ತವ್ಯದಿಂದ ಮಹಾ ನಗರವಾಗಿ ಬೆಳೆಯುವ ಜತೆಗೆ ಭೂ ಕೈಲಾಸ ಎಂಬ ಖ್ಯಾತಿಗೆ ಪಾತ್ರವಾಗಿದೆ. 900 ವರ್ಷಗಳ ಪ್ರಾಚೀನ ಪದ್ಧತಿಯಂತೆ ಜಾತ್ರೆಯನ್ನು ನಡೆಸಲು ಸಕಲ ಸಿದ್ಧತೆ ನಡೆದಿದೆ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜ.13ರಂದು ಎಣ್ಣೆ ಮಜ್ಜನ, 68 ಲಿಂಗಗಳಿಗೆ ತೈಲಾಭಿಷೇಕ, 14ರಂದು ಅಕ್ಷತಾ ಸಮಾರಂಭ, 15ರಂದು ಹೋಮ, ಪ್ರದೀಪನ ಸಮಾರಂಭ, 16ರಂದು ಮದ್ದು ಸುಡುವುದು ಹಾಗೂ 17ರಂದು ನಂದಿ ಧ್ವಜಗಳ ಕಪ್ಪಡಕಳಿ ಕಾರ್ಯಕ್ರಮ ನಡೆಯಲಿವೆ. ಅಲ್ಲದೆ ರೇವಣಸಿದ್ಧೇಶ್ವರ ಮಂದಿರದ ಪರಿಸರದಲ್ಲಿ ಜಾನುವಾರುಗಳ ಪ್ರದರ್ಶನ ಮತ್ತು ಮಾರಾಟ, ಹೋಮ, ಮೈದಾನದಲ್ಲಿ ಕೃಷಿ ಪ್ರದರ್ಶನ ನಡೆಯಲಿವೆ ಎಂದರು.

ವಿವಿಧ ಮನರಂಜನೆಯ ಗೃಹಪಯೋಗಿ ವಸ್ತು, ಚಿತ್ರಕಲೆ, ಹಸ್ತ ಕಲೆ ಸೇರಿದಂತೆ 220 ಮಳಿಗೆಗಳನ್ನು ತೆರೆಯಲಾಗುವುದು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ 26 ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಪಘಾತ ವಿಮೆ ಯೋಜನೆಯಡಿ ದೇವಸ್ಥಾನ ಸಮಿತಿಯಿಂದ ವಿಮೆ ಸಹ ಮಾಡಲಾಗುವುದು ಎಂದು ಹೇಳಿದರು.

ಜಾತ್ರಾ ಮಧ್ಯವರ್ತಿ ಸಮಿತಿ ಮಖ್ಯಸ್ಥರನ್ನಾಗಿ ರಾಮಕೃಷ್ಣ ನಷ್ಟೆ, ಜಾಗೆ ವಿತರಣೆ ಸಮಿತಿಗೆ ಬಾಳಾಸಾಹೇಬ ಭೋಗಡೆ. ಮೆರವಣಿಗೆ ಸಮಿತಿಗೆ ಮಲ್ಲಿನಾಥ ಜೋಡಬಾವಿ, ಬಣ್ಣ ಮತ್ತು ವಿದ್ಯುತ್‌ ಅಲಂಕಾರ ಸಮಿತಿಗೆ ಗಿರೀಶ ಗೋರನಳ್ಳಿ, ಪಶು ಪ್ರದರ್ಶನ ಸಮಿತಿಗೆ ಕಾಶೀನಾಥ ದರ್ಗೇಪಾಟೀಲ, ಮದ್ದು ಸುಡುವ ಸಮಿತಿಗೆ ವಿಶ್ವನಾಥ ಅಳಂಗೆ, ಪ್ರಚಾರ ಮತ್ತು ಪ್ರಸಿದ್ಧಿ ಸಮಿತಿಗೆ ಆರ್.ಸಿ.ಪಾಟೀಲ. ಕೃಷಿ ಪ್ರದರ್ಶನ ಸಮಿತಿಗೆ ಮಹದೇವ ಚಾಕೋತೆ ಅವರನ್ನು ಪ್ರಮುಖರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !