ವಿಜಯಪುರ ಜಿಲ್ಲೆಯಲ್ಲಿ ವರ್ಷಧಾರೆ: ಸಿಡಿಲಿಗೆ ಇಬ್ಬರ ಬಲಿ

ಸೋಮವಾರ, ಜೂನ್ 24, 2019
25 °C

ವಿಜಯಪುರ ಜಿಲ್ಲೆಯಲ್ಲಿ ವರ್ಷಧಾರೆ: ಸಿಡಿಲಿಗೆ ಇಬ್ಬರ ಬಲಿ

Published:
Updated:

ವಿಜಯಪುರ: ವಿಜಯಪುರ ಜಿಲ್ಲೆಯ ವಿವಿಧೆಡೆ ಬುಧವಾರವೂ ವರ್ಷಧಾರೆ ಮುಂದುವರೆದಿದ್ದು, ಮಂಗಳವಾರ ಸಿಡಿಲಿನ ಅಬ್ಬರಕ್ಕೆ ಇಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಕುರಿಗಾಹಿ ಕರೆಪ್ಪ ವಿಠ್ಠಲ ಹಿರೇಕುರುಬರ (30), ಮುದ್ದೇಬಿಹಾಳ ತಾಲ್ಲೂಕಿನ ಡೊಂಕಮಡು ಗ್ರಾಮದ ತೋಟದ ವಸತಿಯ ರೇಣುಕಾ ಶಿವರಾಯಪ್ಪ ಕೂಡಲಗಿ (35) ಮೃತಪಟ್ಟವರು.

ವಿಜಯಪುರ ತಾಲ್ಲೂಕಿನ ದ್ಯಾಬೇರಿ ಗ್ರಾಮದ ಕೃಷ್ಣ ಮಾರುತಿ ತರಸೆ, ಸಿಂದಗಿಯ ಸಿರಾಜ ಬಾ.ಮರ್ತೂರ ಸಿಡಿಲು ಬಡಿದು ಗಾಯಗೊಂಡಿದ್ದಾರೆ.

ಜಿಲ್ಲೆಯ ವಿವಿಧೆಡೆ 3 ಎಮ್ಮೆ, 4 ಆಡು, 6 ಕುರಿ, 1 ಹೋರಿ, 2 ಕುದುರೆ, 2 ಆಕಳು ಸಹ ಮೃತಪಟ್ಟಿದ್ದು, 27 ಮನೆಗಳಿಗೆ ಹಾನಿಯಾಗಿದೆ. ವೀರೇಶ ಗೊಬ್ಬೂರ ಎಂಬ ರೈತರ ಎರಡು ಎಕರೆ ಬಾಳೆ ತೋಟ ಬಿರುಗಾಳಿ–ಮಳೆಯ ಅಬ್ಬರಕ್ಕೆ ಸಂಪೂರ್ಣ ನಾಶವಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !