‘ಸಿಖ್‌ ಉಗ್ರವಾದ’ ಪದ ಕೈಬಿಟ್ಟ ಕೆನಡಾ

ಶುಕ್ರವಾರ, ಏಪ್ರಿಲ್ 19, 2019
22 °C

‘ಸಿಖ್‌ ಉಗ್ರವಾದ’ ಪದ ಕೈಬಿಟ್ಟ ಕೆನಡಾ

Published:
Updated:

ಟೊರೆಂಟೊ: ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೆನಡಾ ಹೊರತಂದಿರುವ 2018ರ ವಾರ್ಷಿಕ ವರದಿಯಲ್ಲಿ ‘ಸಿಖ್‌ ಉಗ್ರವಾದ’ ಎಂಬ ವಿಷಯವನ್ನು ಕೈಬಿಡಲಾಗಿದೆ.

ಈ ಮೊದಲು ದೇಶಕ್ಕೆ ಅಪಾಯ ತಂದೊಡ್ಡಿರುವ ಐದು ಪ್ರಮುಖ ಉಗ್ರವಾದಗಳ ಪೈಕಿ ಸಿಖ್‌ ಉಗ್ರವಾದವನ್ನೂ ಸೇರಿಸಲಾಗಿತ್ತು.

‘ಭಾರತದೊಳಗೇ ಸ್ವತಂತ್ರವಾದ ರಾಜ್ಯವೊಂದನ್ನು ಸ್ಥಾಪಿಸುವುದನ್ನು ಬೆಂಬಲಿಸುತ್ತಿರುವ ಉಗ್ರಗಾಮಿಗಳಿಂದ ದೇಶಕ್ಕೆ ಅಪಾಯ ಇದೆ ಎಂಬುದಾಗಿ ಮಾತ್ರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿ ಹೇಳುವಾಗ ಯಾವುದೇ ಧರ್ಮದ ಹೆಸರನ್ನೂ ಹೇಳಿಲ್ಲ’ ಎಂಬ ದಿ ಕೆನಡಿಯನ್‌ ಪ್ರೆಸ್‌ ವರದಿಯನ್ನು ಉಲ್ಲೇಖಿಸಿ ಟೊರೆಂಟೊ ಮೂಲದ ಸಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !