ನೇಕಾರರ ಶ್ರಮ ತಗ್ಗಿಸಿದ ತಂತ್ರಜ್ಞಾನ

ಬುಧವಾರ, ಮೇ 22, 2019
32 °C

ನೇಕಾರರ ಶ್ರಮ ತಗ್ಗಿಸಿದ ತಂತ್ರಜ್ಞಾನ

Published:
Updated:
Prajavani

ಬೆಂಗಳೂರು: ಕೈಮಗ್ಗ ಯಂತ್ರಕ್ಕೆ ನ್ಯೂಮ್ಯಾಟಿಕ್ ಲಿಫ್ಟಿಂಗ್ ತಂತ್ರಜ್ಞಾನ (ಸ್ವಯಂಚಾಲಿತ ಮೇಲೆತ್ತುವ ತಂತ್ರಜ್ಞಾನ) ಅಳವಡಿಸುವ ಮೂಲಕ ನೇಕಾರರ ದೈಹಿಕ ಶ್ರಮ ಕಡಿಮೆ ಮಾಡುವ ಪ್ರಯತ್ನವನ್ನು ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆ ಮಾಡಿದೆ.

‌ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಸ್ವಯಂಚಾಲಿತ ಬಾಗಿಲು ಮುಚ್ಚುವ ಯಂತ್ರವನ್ನು ಮಾದರಿಯಾಗಿಸಿಕೊಂಡು ಈ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿದೆ.

ರೇಷ್ಮೆ ನೂಲು ತೆಗೆದ ನಂತರ ಸೀರೆ ಅಥವಾ ವಿವಿಧ ವಿನ್ಯಾಸದ ಬಟ್ಟೆಗಳನ್ನು ಮಗ್ಗದಲ್ಲಿ ನೇಯುವಾಗ ನೇಕಾರರು 50ರಿಂದ 60 ಕೆ.ಜಿ ತೂಕವನ್ನು ಕಾಲಿನಿಂದ ಒತ್ತಬೇಕಾಗುತ್ತದೆ. ದಿನವಿಡಿ ಇದೇ ರೀತಿ ಶ್ರಮ ಹಾಕುವುದರಿಂದ ನೇಕಾರರ ಆರೋಗ್ಯ ಹದಗೆಟ್ಟು ಹೋಗುತ್ತಿದೆ.

ಇದಕ್ಕೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ಸಂಶೋಧಕರು ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ನ್ಯೂಮ್ಯಾಟಿಕ್ ಲಿಫ್ಟಿಂಗ್ ತಂತ್ರಜ್ಞಾನದ ಮಗ್ಗ ಚಾಲನೆ ಮಾಡಲು ದೈಹಿಕ ಶ್ರಮದ ಅಗತ್ಯವಿಲ್ಲ. ಬೆರಳ ತುದಿಯಲ್ಲಿ ಚಾಲನೆ ಮಾಡಬಹುದು ಎಂದು ಸಂಸ್ಥೆಯ ನಿರ್ದೇಶಕ ಸುಭಾಷ್ ವಿ. ನಾಯಕ್ ಹೇಳಿದರು.

ಸಂಸ್ಥೆಯಲ್ಲಿ ಕಂಡುಹಿಡಿದ ತಂತ್ರಜ್ಞಾನವನ್ನು ಅಳವಡಿಸಿ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. ಈ ಹೊಸ ತಂತ್ರಜ್ಞಾನದ 10 ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ದೇಶದಾದ್ಯಂತ ನೇಕಾರರಿಗೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಸ್ವಯಂಚಾಲಿತ ನೂಲುವ ಯಂತ್ರ, ರೇಷ್ಮೆ ತಿರುಗಿಸುವ ಯಂತ್ರ, ಕಂಪ್ಯೂಟರ್ ನೆರವಿನ ಜವಳಿ ವಿನ್ಯಾಸ, ಬಣ್ಣ ಹಚ್ಚುವುದು ಸೇರಿ ಎಲ್ಲದಕ್ಕೂ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇದರಿಂದ ನೇಕಾರರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !