ಐರಾವತ ಬಸ್‌ನಲ್ಲಿ ಬೆಳ್ಳಿ ದೀಪ ಸಾಗಾಟ

7
ಚಾಲಕರ ಅಮಾನತು

ಐರಾವತ ಬಸ್‌ನಲ್ಲಿ ಬೆಳ್ಳಿ ದೀಪ ಸಾಗಾಟ

Published:
Updated:
Prajavani

ಬೆಂಗಳೂರು: ಕೆಎಸ್‌ಆರ್‌ಟಿಸಿಯ ‘ಐರಾವತ’ ಕ್ಲಬ್‌ ಕ್ಲಾಸ್‌ ಬಸ್‌ನ ಡಿಕ್ಕಿಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ₹ 15 ಲಕ್ಷ ಮೌಲ್ಯದ 699 ಬೆಳ್ಳಿ ದೀಪಗಳನ್ನು ನಿಗಮದ ಭದ್ರತಾ ನಿರೀಕ್ಷಕರ ತಂಡ ವಶಪಡಿಸಿಕೊಂಡಿದೆ. 

ಬೆಂಗಳೂರು- ವಿಜಯವಾಡ ಮಾರ್ಗದ ಬಸ್‌ನಲ್ಲಿ ಈ ಮಾಲು ಪತ್ತೆಯಾಗಿದೆ. ಹೊಸಕೋಟೆ ಟೋಲ್ ಬಳಿ ಬಸ್‌ ತಪಾಸಣೆ ಮಾಡಿದಾಗ ಬೆಳ್ಳಿ ದೀಪಗಳು ಸಿಕ್ಕಿವೆ. ಇವುಗಳ ತೂಕ 40.950 ಕೆಜಿ ಇದೆ. ಬಸ್‌ನ ಚಾಲಕ ಎನ್.ನಾರಾಯಣಪ್ಪ, ಹಾಗೂ ಚಾಲಕ–ನಿರ್ವಾಹಕ ಕೃಷ್ಣಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.

ರಾತ್ರಿ 10.30ರ ವೇಳೆಗೆ ತಪಾಸಣೆ ನಡೆದಿದೆ. ಬದಲಿ ಚಾಲಕರ ಮೂಲಕ ಬಸ್‌ ವಿಜಯವಾಡಕ್ಕೆ ತೆರಳಿದೆ. 

ಬೆಳ್ಳಿ ದೀಪಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಅವುಗಳ ವಾರಸುದಾರರ ಬಗ್ಗೆ ತನಿಖೆ ನಡೆಯುತ್ತಿದೆ.

ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ ರೆಡ್ಡಿ, ವಿಭಾಗೀಯ ಭದ್ರತಾ ನಿರೀಕ್ಷಕಿ ಸಿ.ಕೆ. ರಮ್ಯಾ, ಸಂಚಾರ ನಿಯಂತ್ರಕ ಎಚ್.ಎಂ.ಚಲಪತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 9

  Happy
 • 5

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !