ಹುಸಿ ಬಾಂಬ್‌:ವಿಮಾನ ತುರ್ತು ಭೂಸ್ಪರ್ಶ

ಶುಕ್ರವಾರ, ಜೂನ್ 21, 2019
24 °C

ಹುಸಿ ಬಾಂಬ್‌:ವಿಮಾನ ತುರ್ತು ಭೂಸ್ಪರ್ಶ

Published:
Updated:

ಸಿಂಗಪುರ (ಪಿಟಿಐ): ಬಾಲಕನ ಹುಡುಗಾಟಿಕೆಯಿಂದ 144 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಭಾನುವಾರ ಫಿಲಿಪ್ಪೀನ್ಸ್‌ನ ಸಿಬು ನಗರದಲ್ಲಿ ನಡೆದಿದೆ. 

ಸಿಂಗಪುರಕ್ಕೆ ಪ್ರಯಾಣಿಸುತ್ತಿದ್ದ ಟಿಆರ್‌385 ವಿಮಾನ ಬಾಂಬ್‌ ಬೆದರಿಕೆಯಿಂದಾಗಿ ಸಿಬು ನಗರಕ್ಕೆ ಹಿಂದಿರುಗಿತು. ಬಾಲಕನನ್ನು ತನಿಖೆಗೆ ಒಳಪಡಿಸಿದಾಗ ತಮಾಷೆಗೆ ಈ ರೀತಿ ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ.  ಪ್ರಯಾಣಿಕರ ರಕ್ಷಣೆಗಾಗಿ ವಾಯುಪಡೆಯು ಎರಡು ಎಫ್‌ 15 ಯುದ್ಧ ವಿಮಾನಗಳನ್ನು ಕಳುಹಿಸಿತ್ತು. ಇದೊಂದು ಹುಸಿ ಬಾಂಬ್‌ ಬೆದರಿಕೆಯಾಗಿದ್ದು, ಬಾಲಕನ ಗುರುತಿಸಲಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ಸಿಂಗಪುರ ರಕ್ಷಣಾ ಸಚಿವ ಎನ್‌ ಇಂಗ್ ಹಿನ್ ತಿಳಿಸಿದ್ದಾರೆ.  2018ರ ಅಕ್ಟೋಬರ್‌ನಲ್ಲಿ ಇದೇ ರೀತಿ ಪ್ರಯಾಣಿಕನೊಬ್ಬ ಹುಸಿ ಬಾಂಬ್‌ ಬೆದರಿಕೆಯೊಡ್ಡಿದ್ದ. ಆತನಿಗೆ ದಂಡ ವಿಧಿಸಲಾಗಿತ್ತು.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !