ಸ್ವಿಟ್ಜರ್‌ಲೆಂಡ್ ಅರಣ್ಯದಲ್ಲಿ ಲಘು ವಿಮಾನ ಪತನ: ಒಂದೇ ಕುಟುಂಬದ ನಾಲ್ಕು ಜನ ಸಾವು

7

ಸ್ವಿಟ್ಜರ್‌ಲೆಂಡ್ ಅರಣ್ಯದಲ್ಲಿ ಲಘು ವಿಮಾನ ಪತನ: ಒಂದೇ ಕುಟುಂಬದ ನಾಲ್ಕು ಜನ ಸಾವು

Published:
Updated:

ಬರ್ಲಿನ್‌: ಫ್ರಾನ್‌ನತ್ತ ಪ್ರಯಾಣ ಆರಂಬಿಸಿದ್ದ ಲಘು ವಿಮಾನವೊಂದು ಮಧ್ಯ ಸ್ವಿಟ್ಜರ್‌ಲೆಂಡ್‌ನ ಅರಣ್ಯ ಪ್ರದೇಶದಲ್ಲಿ ಪತನವಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ನಿಡ್ವಾಲ್ಡನ್‌ ವಿಭಾಗ ಪೊಲೀಸ್‌ ಅಧಿಕಾರಿ, ‘ಲ್ಯೂಸೆರ್ನ್‌ ನದಿ ದಂಡೆಯಲ್ಲಿರುವ ಹೆರ್ಗಿಸ್ವಿಲ್‌ ಪಟ್ಟಣ ಸಮೀಪದ ಪಿಲಾಟಸ್‌ ಪರ್ವತ ಪ್ರದೇಶದಲ್ಲಿ ಶನಿವಾರ ಈ ಅವಗಢ ಸಂಭವಿಸಿದೆ’ ಎಂದು ಹೇಳಿದ್ದಾರೆ.

ಅವಗಢ ಸಂಭವಿಸಿರುವ ಸ್ಥಳಕ್ಕೆ ರಕ್ಷಣಾ ಕಾರ್ಯಕರ್ತರನ್ನು ಕಳುಹಿಸಿಕೊಡುವ ಮುನ್ನ ಬೆಂಕಿ ನಂದಿಸಲು ಹೆಲಿಕಾಪ್ಟರ್‌ ಕಳುಹಿಸಿಕೊಡಲಾಗಿದೆ ಎಂದೂ ತಿಳಿಸಿದ್ದಾರೆ.

ವಿಮಾನ ಪತನಕ್ಕೆ ನಿಕರ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಸ್ವಿಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !