ಏಳು ಮೊಟ್ಟೆ ನುಂಗಿದ ನಾಗರಹಾವಿನ ರಕ್ಷಣೆ

ಶುಕ್ರವಾರ, ಮೇ 24, 2019
29 °C

ಏಳು ಮೊಟ್ಟೆ ನುಂಗಿದ ನಾಗರಹಾವಿನ ರಕ್ಷಣೆ

Published:
Updated:
Prajavani

ಬೆಂಗಳೂರು: ರಾಜರಾಜೇಶ್ವರಿನಗರ ಕೃಷ್ಣ ಗಾರ್ಡನ್‌ ಬಳಿ ಕೋಳಿ ಗೂಡಿಗೆ ನುಗ್ಗಿ ಏಳು ಮೊಟ್ಟೆಗಳನ್ನು ನುಂಗಿದ್ದ ನಾಗರಹಾವನ್ನು ವನ್ಯಜೀವಿ ಸಂರಕ್ಷಕರು ಸೋಮವಾರ ರಕ್ಷಣೆ ಮಾಡಿದರು.

ನಾಯಿಮರಿಯೊಂದು ಸಂಜೆ ವೇಳೆ ಕೋಳಿಗೂಡನ್ನು ನೋಡಿ ಒಂದೇಸಮನೆ ಬೊಗಳುತ್ತಿತ್ತು. ಅದರ ವರ್ತನೆ ನೋಡಿ ಸಂಶಯಗೊಂಡ ಮನೆಯ ಮಾಲೀಕರು ಕೋಳಿ ಗೂಡನ್ನು ಇಣುಕಿ ನೋಡಿದಾಗ ಅಲ್ಲಿ ನಾಗರಹಾವು ಸೇರಿಕೊಂಡಿರುವುದು ಕಂಡುಬಂತು. ಅಷ್ಟರಲ್ಲೇ ನಾಟಿ ಕೋಳಿಯ 10 ಮೊಟ್ಟೆಗಳಲ್ಲಿ ಏಳು ಮೊಟ್ಟೆಗಳು ನಾಗರಾಜನ ಹೊಟ್ಟೆ ಸೇರಿದ್ದವು.

ಸ್ಥಳೀಯರೊಬ್ಬರು ‘ಶೇರ್‌ ಹ್ಯಾಬಿಟ್ಯಾಟ್‌’ ಬಳಗದ ಎಚ್‌.ಎನ್‌.ಸೋಮು ಹಾಗೂ ರಶ್ಮಿ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು. ಅವರಿಬ್ಬರು ಹಾವನ್ನು ರಕ್ಷಣೆ ಮಾಡಿದರು.

‘ಹಾವನ್ನು ತುರಹಳ್ಳಿ ಸಂರಕ್ಷಿತ ಕಾಡಿನಲ್ಲಿ ಬಿಟ್ಟಿದ್ದೇವೆ. ಕಾಡಿನಲ್ಲಿ ಬಿಟ್ಟ ಬಳಿಕವೂ ಅದು ನುಂಗಿದ್ದ ಮೊಟ್ಟೆ ಅದರ ಹೊಟ್ಟೆಯಲ್ಲೇ ಇತ್ತು’ ಎಂದು ಸೋಮು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !