‘ಪಾರ್ಕರ್‌ ಸೋಲಾರ್‌’ ಪ್ರೋಬ್‌ ಶುಕ್ರ ಗ್ರಹದತ್ತ

7

‘ಪಾರ್ಕರ್‌ ಸೋಲಾರ್‌’ ಪ್ರೋಬ್‌ ಶುಕ್ರ ಗ್ರಹದತ್ತ

Published:
Updated:
Deccan Herald

ವಾಷಿಂಗ್ಟನ್‌: ಸೂರ್ಯನ ವಾತಾವರಣವನ್ನು ಅಧ್ಯಯನ ಮಾಡುವ ಸಲುವಾಗಿ ನಾಸಾ ಕಳುಹಿಸಿದ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯು ಶುಕ್ರಗ್ರಹದತ್ತ ಮುನ್ನುಗ್ಗುತ್ತಿದ್ದು, ಅದರಿಂದ 2,500 ಕಿ.ಮೀ ಅಂತರದಲ್ಲಿ ತನ್ನ ಯಾನ ಮುಂದುವರಿಸಿದೆ.

ಶುಕ್ರಗ್ರಹದ ಗುರುತ್ವಾಕರ್ಷಣೆ ಶಕ್ತಿಯು ಈ ನೌಕೆಯು ಸೂರ್ಯನ ವಾತಾ ವರಣಕ್ಕೆ ಮತ್ತಷ್ಟು ಹತ್ತಿರ ತಲುಪಲು ನೆರವಾಗುತ್ತದೆ ಎಂದು ನಾಸಾ ತಿಳಿಸಿದೆ.

ಸುಮಾರು 62 ಲಕ್ಷ ಕಿ.ಮೀ. ದೂರದ ಸೂರ್ಯನ ಹೊರಭಾಗ ಕರೋನಾ ಪ್ರವೇಶಿಸಿ ಅಧ್ಯಯನ ನಡೆಸುವ ಪ್ರಯತ್ನ ಇದಾಗಿದೆ. ಸೌರ
ಮಾರುತದ ಇರುವಿಕೆಯನ್ನು 60 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದ ಖಗೋಳ ವಿಜ್ಞಾನಿ ‘ಯುಗೀನ್‌ ಪಾರ್ಕರ್‌’ ಗೌರವಾರ್ಥ ಅವರ ಹೆಸರನ್ನೇ ನೌಕೆಗೆ ಇಡಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !