ನಿಗದಿತ ಸಮಯಕ್ಕೆ ಧಾರ್ಮಿಕ ಕಾರ್ಯ; ಕಾಡಾದಿ

7
ನಂದಿಧ್ವಜ ಧಾರಿಗಳು ಮತ್ತು ಮಾನಕಾರಿಗಳ ಸಭೆಯಲ್ಲಿ ನಿರ್ಧಾರ

ನಿಗದಿತ ಸಮಯಕ್ಕೆ ಧಾರ್ಮಿಕ ಕಾರ್ಯ; ಕಾಡಾದಿ

Published:
Updated:
Prajavani

ಸೊಲ್ಲಾಪುರ: ನಗರದ ಆರಾಧ್ಯ ದೈವ ಸಿದ್ಧರಾಮೇಶ್ವರರ ಜಾತ್ರೆಯಲ್ಲಿ ಅಕ್ಷತಾ ಸಮಾರಂಭದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಬೇಕು ಎಂದು ನಂದಿಧ್ವಜ ಧಾರಿಗಳು ಮತ್ತು ಮಾನಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ದೇವಸ್ಥಾನದ ಪಂಚ ಕಮಿಟಿಯ ಕಾರ್ಯಾಲಯದಲ್ಲಿ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಧರ್ಮರಾಜ ಕಾಡಾದಿ ಮಾತನಾಡಿ, ‘900 ವರ್ಷಗಳಿಂದಲೂ ಸಿದ್ಧರಾಮೇಶ್ವರರ ಜಾತ್ರೆ ನಡೆಯುತ್ತಿದ್ದು, ಈ ಜಾತ್ರೆಯಲ್ಲಿ ಪ್ರತಿಯೊಂದು ಮನೆತನಕ್ಕೆ ಸ್ಥಾನಮಾನವಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಶ್ರದ್ಧಾ ಭಕ್ತಿಯಿಂದ ನಿಭಾಯಿಸುತ್ತಿದ್ದಾರೆ’ ಎಂದರು.

‘ಸಿದ್ಧರಾಮೇಶ್ವರರ ಚರಿತ್ರೆ, ಕಾರ್ಯ ಮತ್ತು ಅವರ ವಚನ ಸಾಹಿತ್ಯಗಳು ಪ್ರಸಾರವಾಗಲು ದೇವಸ್ಥಾನದ ಪಂಚ ಕಮಿಟಿ ಪ್ರಯತ್ನಶೀಲವಾಗಿದೆ. ಕವಿ ನಾರಾಯಣ ಕುಲಕರ್ಣಿ, ವಚನ ಸಾಹಿತ್ಯ ಅಭಂಗಗಳಲ್ಲಿ ಮಂಡಿಸಿದ್ದಾರೆ. ಸಿದ್ಧೇಶ್ವರರ ಚರಿತ್ರೆ ಈಗ ಆಂಗ್ಲ ಮತ್ತು ತೆಲುಗು ಭಾಷೆಗಳಲ್ಲಿಯೂ ಲೋಕಾರ್ಪಣೆಯಾಗುತ್ತಿದೆ’ ಎಂದು ಕಾಡಾದಿ ತಿಳಿಸಿದರು.

ರಾಜಶೇಖರ ಹಿರೆ ಹಬ್ಬು, ಸಮಿತಿಯ ಸಭಾಪತಿ ರಾಮಕೃಷ್ಣ ನಷ್ಟೆ. ಸೋಮಶಂಕರ ದೇಶಮುಖ್‌, ಚಿದಾನಂದ ವನಾರೋಟೆ, ಗಂಗಾಧರ ಕುಮಠೆಕರ, ಬಸವರಾಜ ಅಷ್ಟಗಿ, ಗುರುರಾಜ ಮಾಳಗೆ, ಡಾ.ರಾಜೇಂದ್ರ ಗೂಳಿ, ಕೇದಾರ ಉಂಬರಜ, ರಾಜಶೇಖರ ಚಡಚಣಕರ, ರೇವಣಸಿದ್ಧ ಬನಶೆಟ್ಟಿ, ಸೋಮನಾಥ ಮೇಂಗಾಣೆ, ನರೇಂದ್ರ ಗಂಭೀರೆ ಸಭೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !