‘ನಗರ ಅಭಿವೃದ್ಧಿಗೆ ₹12 ಸಾವಿರ ಕೋಟಿ’

7
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳ ಉದ್ಘಾಟನೆ

‘ನಗರ ಅಭಿವೃದ್ಧಿಗೆ ₹12 ಸಾವಿರ ಕೋಟಿ’

Published:
Updated:
Prajavani

ಬೆಂಗಳೂರು: ನಗರದ ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳಲ್ಲಿ ₹12 ಸಾವಿರ ಕೋಟಿ ಖರ್ಚು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು. 

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

'ನಗರದ ಜನರ ಅವ್ಯಶಕತೆಗೆ ತಕ್ಕಂತೆ ಸರ್ಕಾರ ಸ್ಪಂದಿಸಲಿದೆ. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು. ಕಾವೇರಿ ನದಿ ನೀರು 5ನೇ ಹಂತದ ಯೋಜನೆಗೆ ₹6 ಸಾವಿರ ಕೋಟಿ ವ್ಯಯಿಸಲಾಗಿದೆ. ಪಾಲಿಕೆ ಬೀದಿ ದೀಪಗಳಿಗೆ ಎಲ್ಇಡಿ ಆಳವಡಿಸಲು ₹ 1,500 ಕೋಟಿ, ರಸ್ತೆ ಗುಂಡಿ ಮುಕ್ತ ಮಾಡಲು 198 ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗಿದೆ’ ಎಂದರು.

ಶಾಸಕ ವಿ.ಸೋಮಣ್ಣ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಸಾರ್ವಜನಿಕ ಸೇವಾ ಸಂಕೀರ್ಣ ಆರಂಭಿಸಲಾಗಿದೆ. ಚೆನ್ನೈ ಮಾದರಿಯಲ್ಲಿ ನಮ್ಮ ವಿಧಾನ
ಸಭಾ ಕೇತ್ರದಲ್ಲಿ ಎರಡೂವರೆ ಎಕರೆ ಪ್ರದೇಶದಲ್ಲಿ ಗ್ರಂಥಾಲಯ ಸ್ಥಾಪಿಸುವ ಇಚ್ಛೆ ಇದೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !