ಸೋಮವಾರ, ಸೆಪ್ಟೆಂಬರ್ 16, 2019
23 °C
ಕೊಳ್ಳೇಗಾಲದಲ್ಲಿ: ಸಚಿವ ಸೋಮಣ್ಣ ಹೇಳಿಕೆ– ಸಂಪುಟ ವಿಸ್ತರಣೆ ಗೊಂದಲವಿಲ್ಲ

ಬಿಎಸ್‌ವೈ ಅದೃಷ್ಟವಂತ: ಪ್ರಕೃತಿ ಮಾತೆ ಆಶೀರ್ವದಿಸಿದ್ದಾಳೆ

Published:
Updated:

ಕೊಳ್ಳೇಗಾಲ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದೃಷ್ಟವಂತರು. ಪ್ರಕೃತಿ ಮಾತೆಯ ಆಶೀರ್ವಾದ ಅವರಿಗಿದೆ. 10 ವರ್ಷಗಳಿಲ್ಲದ ಮಳೆ ಈಗ ಬಂದಿದೆ. ಆಲಮಟ್ಟಿಯಿಂದ ಹಿಡಿದು ಎಲ್ಲ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ತುಂಬಿವೆ’ ಎಂದು ಸಚಿವ ವಿ.ಸೋಮಣ್ಣ ಹೇಳಿದರು. 

ಕೊಳ್ಳೇಗಾಲದಲ್ಲಿ ನೆರೆಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದಲ್ಲೂ ಗೊಂದಲವಿಲ್ಲ. ಯಡಿಯೂರಪ್ಪ ಅವರು ಶೇ 50ರಷ್ಟು ಸಂಪುಟವನ್ನು ರಚಿಸಿದ್ದಾರೆ. ಉಳಿದ ಖಾತೆಗಳನ್ನು ಉಳಿಸಿದ್ದಾರೆ. ಅವರು ಯಾರಿಗೆ ಏನು ಮಾತು ಕೊಟ್ಟಿದ್ದರೋ ಅದನ್ನು ಉಳಿಸಿಕೊಳ್ಳುವ ದೊಡ್ಡ ತನ ಪ್ರದರ್ಶಿಸಿದ್ದಾರೆ’ ಎಂದು ಹೇಳಿದರು. 

ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೀಡಿರುವ ಹೇಳಿಕೆಗಳ ಬಗ್ಗೆ ಕೇಳಿದಾಗ, ‘ಬಾಲಚಂದ್ರ ಅವರು ತಮ್ಮ ಅಣ್ಣನಾಗಿ ತ್ಯಾಗ ಮಾಡಿದ್ದಾರೆ’ ಎಂದರು.

ಉಮೇಶ್‌ ಕತ್ತಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಬಗ್ಗೆ ಕೇಳಿದ್ದಕ್ಕೆ, ‘ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ನಾನು, ಸಿದ್ದರಾಮಯ್ಯ, ಉಮೇಶ್‌ ಕತ್ತಿ ಎಲ್ಲರನ್ನೂ ಭೇಟಿ ಮಾಡುತ್ತೇವೆ. ಹಾಗಾಗಿ, ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ’ ಎಂದರು. 

‘ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈಗ ರಾಜಕೀಯ ಎಲ್ಲ ಬಿಟ್ಟು, ಜನರಿಗೆ ನೆರವಾಗಬೇಕಿದೆ. ಅಭಿವೃದ್ಧಿ ಬಗ್ಗೆ ಮಾತ್ರ ಯೋಚಿಸೋಣ’ ಎಂದು ಹೇಳಿದರು. 

Post Comments (+)