ಶನಿವಾರ, ಸೆಪ್ಟೆಂಬರ್ 25, 2021
22 °C
sonali-kher-dinner

ಸೋನಾಲಿ ಭೇಟಿ ಮಾಡಿದ ಅನುಪಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ನಟ ರಿಷಿಕಪೂರ್ ಅವರನ್ನು ಭೇಟಿ ಮಾಡಲು ನಟ ಅನುಪಮ್ ಖೇರ್ ಈಚೆಗೆ ನ್ಯೂಯಾರ್ಕ್‌ಗೆ ತೆರಳಿದ್ದರು. ರಿಷಿಯನ್ನು ಭೇಟಿ ಮಾಡಿದ ಅನುಪಮ್, ಆಗ ಅಲ್ಲಿಯೇ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ನಟಿ ಸೋನಾಲಿ ಬೇಂದ್ರೆ ಅವರನ್ನು ಭೇಟಿ ಮಾಡಿದ್ದಾರೆ. ಸೋನಾಲಿ ಮತ್ತು ಆಕೆಯ ಪತಿ ಗೋಲ್ಡಿ ಬೇಹ್ಲ್ ಅವರನ್ನೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರಂತೆ.

‘ಸುಂದರಿ ಸೋನಾಲಿ ಜತೆಗೂಡಿ ರಾತ್ರಿಯ ಊಟ ಮಾಡಿದ್ದು ತುಂಬಾ ಸಂತಸವಾಯಿತು. ಆಕೆಯ ಜೀವನಪ್ರೀತಿ ಕಂಡು ಬೆರಗಾಗಿದ್ದೇನೆ. ಅವಳ ಜೀವನ ನಿಜಕ್ಕೂ ಸ್ಫೂರ್ತಿದಾಯಕ’ ಎಂದು ಅನುಪಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು, ಫೋಟೊ ಕೂಡಾ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು