ದಕ್ಷಿಣ ರಾಜ್ಯಗಳ ವಿಜ್ಞಾನ ಮೇಳ

7

ದಕ್ಷಿಣ ರಾಜ್ಯಗಳ ವಿಜ್ಞಾನ ಮೇಳ

Published:
Updated:
Prajavani

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ, ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ಹಾಗೂ ಮಹತ್ವದ  ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ 7ರಿಂದ (ಸೋಮವಾರ) 11ರವರೆಗೆ ದಕ್ಷಿಣ ರಾಜ್ಯಗಳ ವಿಜ್ಞಾನ ಮೇಳ (2019) ಆಯೋಜಿಸಿದೆ. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಸಹಯೋಗ ನೀಡಿದೆ.

ವಿಜ್ಞಾನ ಮೇಳ ವಿಠಲ್‌ ಮಲ್ಯ ರಸ್ತೆಯಲ್ಲಿರುವ ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ನಲ್ಲಿ ನಡೆಯಲಿದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು.

ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿಯಿಂದ ವಿದ್ಯಾರ್ಥಿಗಳ ತಂಡಗಳು ಮೇಳದಲ್ಲಿ ಭಾಗವಹಿಸಿ ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುವರು.

ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳವನ್ನು 1982ರಿಂದಲೂ ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯದ್ದು 32ನೇ ಆವೃತ್ತಿ. ದಕ್ಷಿಣ ಭಾರತದ 8, 9 ಮತ್ತು 10ನೇ ತರಗತಿಗಳಿಂದ 600ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಐದು ರಾಜ್ಯಗಳ ಶಿಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ. ಬ್ಲಾಕ್‌ ಮಟ್ಟ, ಜಿಲ್ಲಾ ಮಟ್ಟ, ಪ್ರಾದೇಶಿಕ ಮಟ್ಟ ಹಾಗೂ ರಾಜ್ಯಮಟ್ಟದ ವಿಜ್ಞಾನ ಮೇಳಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಇಲ್ಲಿ ಭಾಗವಹಿಸುವರು.

ಮೇಳದಲ್ಲಿ ಭಾಗವಹಿಸುವ ವಿವಿಧ ರಾಜ್ಯಗಳ ಶಿಕ್ಷಕ ಪರಿಣಾಮಕಾರಿ ವಿಜ್ಞಾನ ಬೋಧನೆಗಾಗಿ ರಚಿಸಿದ ಸಾಧನಗಳನ್ನು ಪ್ರದರ್ಶಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು. ವೈಯಕ್ತಿಕ ಪ್ರದರ್ಶನ ಮತ್ತು ಗುಂಪು ಪ್ರದರ್ಶನ ವಿಭಾಗದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಇಲ್ಲಿ ಆಯ್ಕೆಯಾಗುವವರು ಇಂಟೆಲ್‌ ಸಂಸ್ಥೆ ಆಯೋಜಿಸುವ ನ್ಯಾಷನಲ್‌ ಮತ್ತು ಇಂಟರ್‌ನ್ಯಾಷನಲ್‌ ಸೈನ್ಸ್‌ ಎಂಜಿನಿಯರಿಂಗ್‌ ಫೇರ್‌ನಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮೇಳದ ಉದ್ದೇಶ
* ಬಾಲ/ಯುವ ವಿಜ್ಞಾನಿಗಳ ಆವಿಷ್ಕಾರಗಳಿಗೆ ವೇದಿಕೆ ಮತ್ತು ಮನ್ನಣೆ ದೊರಕಿಸುವುದು. ಮೂಢನಂಬಿಕೆ, ಮೌಢ್ಯಗಳ ಆಚರಣೆಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಅರಿವು ಮೂಡಿಸುವುದು.

* ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಂಡು ಸಾಮಾಜಿಕ ಬದಲಾವಣೆಗಳನ್ನು ಉಂಟು ಮಾಡುವುದು. ಪರಿಸರ ಮಾಲಿನ್ಯ, ಅದರ ಪರಿಣಾಮ, ನಿಯಂತ್ರಣಗಳ ಮಹತ್ವ ತಿಳಿಸುವುದು.

* ನಿತ್ಯ ಜೀವನದಲ್ಲಿ ಆಧುನಿಕ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆಯ ಸಾಧ್ಯತೆಗಳನ್ನು ಮನಗಾಣಿಸುವುದು. ಕೃಷಿ, ಕೈಗಾರಿಕೆಗಳಲ್ಲಿ ತಂತ್ರಜ್ಞಾನದ ಯಶಸ್ವಿ ಅಳವಡಿಕೆಯನ್ನು ವಿವರಿಸುವುದು.

* ಆರೋಗ್ಯ, ನೈರ್ಮಲ್ಯಗಳನ್ನು ಕಾಯ್ದುಕೊಳ್ಳುವ ಯಶಸ್ವಿ ಸೂತ್ರಗಳನ್ನು ಅಳವಡಿಸುವುದು, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಮಹತ್ವ ಸಾರುವುದು.

* ಶಾಲಾ ವಿದ್ಯಾರ್ಥಿಗಳು ಮತ್ತು ಸಮಾಜದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಿಸುವುದು, ಪರಸ್ಪರ ಸಂಬಂಧ ಹಾಗೂ ಅವಲಂಬನೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು.

* ಪರಿಸರ ಪ್ರೇಮ, ಜಾಗೃತಿ ಮೂಡಿಸುವುದು. ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಿ ಪ್ರೇರೇಪಿಸುವುದು. ವಿಜ್ಞಾನ ಮತ್ತು ವೈಚಾರಿಕತೆಗಳ ಪರಸ್ಪರ ಸಂಬಂಧ ಮತ್ತು ವ್ಯತ್ಯಾಸಗಳ ಅರಿವುದು ಮೂಡಿಸುವುದು.

* ಸಮಾಜಕ್ಕೆ ಮತ್ತು ದೇಶಕ್ಕೆ ಯುವ ವಿಜ್ಞಾನಿ ಪ್ರತಿಭೆಗಳನ್ನು ಪರಿಚಯಿಸುವುದು. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಯುವ ಪೀಳಿಗೆಯನ್ನು ತೊಡಗಿಸುವ ಉದ್ದೇಶವನ್ನು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !